ತುಮಕೂರು: ಸಚಿವ ವಿ ಸೋಮಣ್ಣ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡ ನಿರ್ಧಾರ ಸ್ಥಳೀಯರ ನೆಮ್ಮದಿ ಕೆಡಿಸಿದೆ. ವಿ ಸೋಮಣ್ಣ ಇತ್ತಿಚೆಗೆ ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದ್ದರು. ಸಿಎಂ ಸಮಾಧಾನ ಮಾಡಿದರೂ ಅಷ್ಟಾಗಿ ಸಮಾಧಾನಗೊಳ್ಳಲಿಲ್ಲ. ಬಳಿಕ ಅಮಿತ್ ಶಾ ಅವರೇ ದೆಹಲಿಗೆ ಕರೆಸಿ ಸಮಾಧಾನ ಮಾಡಿದ್ದರು. ನಂತರದಲ್ಲಿ ಸೋಮಣ್ಣ ಕೂಡ ನಾನು ಪಕ್ಷದ ಹೈಕಮಾಂಡ್ ಸೂಚಿಸಿದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.
ಅಮಿತ್ ಶಾ ಮತ್ತು ಸೋಮಣ್ಣ ಭೇಟಿ ಬೆನ್ನಲ್ಲೇ ಅರುಣ್ ಸೋಮಣ್ಣ ಅವರನ್ನು ತುಮಕೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅರುಣ್ ಸೋಮಣ್ಣ ಕೂಡ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅದರಲ್ಲೂ ಗುಬ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಗುಬ್ಬಿಯಲ್ಲಿಯೇ ಮನೆ ಖರೀದಿಸುವುದಕ್ಕೆ ಯೋಜನೆ ರೂಪಿಸಿದ್ದರು. ಆದರೆ ಯಾವ ಕಾರಣಕ್ಕೋ ಏನೋ ಅದನ್ನು ಅಲ್ಲಿಗೆ ನಿಲ್ಲಿಸಿದ್ದಾರೆ.
ಈಗ ಗುಬ್ಬಿಯಲ್ಲಿ ಬಿಜೆಪಿ ನಾಯಕರಿಂದಾನೇ ಅಸಮಾಧಾನ ಎದ್ದಿದೆ. ಅರುಣ್ ಸೋಮಣ್ಣ ಯಾರು. ಇಷ್ಟು ವರ್ಷ ಪಕ್ಷ ಸಂಘಟನೆಗಾಗಿ ದುಡಿದ ಸ್ಥಳೀಯರು ಯಾರು ಇಲ್ವಾ ಎಂದೆಲ್ಲಾ ಪ್ರಶ್ನೆಗಳನ್ನಹ ಕೇಳುತ್ತಿದ್ದಾರೆ. ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಅರುಣ್ ಸೋಮಣ್ಣ ಅಭಿಯಾನವೂ ಆರಂಭವಾಗಿದೆ.