Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇಂದಿನ ದಿನಗಳಲ್ಲಿ ನಾಟಕಗಳ ಪ್ರದರ್ಶನ ದುಬಾರಿಯಾಗಿದೆ : ಅಪ್ಪಾರಾವ್ ಅಕ್ಕೋಣಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ, (ಮಾ.28) :  ಸಿನಿಮಾ, ಟಿ.ವಿ, ಮತ್ತು ವಾಟ್ಸ್ ಆಪ್ ಬರೀ ರಂಗಭೂಮಿಯ ಮೇಲೆ ಪರಿಣಾಮ ಬೀರಿ, ಶಿಕ್ಷಣದ ಮೇಲೂ ಸಹಾ ಪರಿಣಾಮವನ್ನು ಬೀರುವುದರ ಮೂಲಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೋಣಿ ವಿಷಾಧಿಸಿದ್ದಾರೆ.

 

ಜಿಲ್ಲಾ ಶರಣ ಸಾಹಿತ್ಯ ಪರಿಷತ್, ರಂಗಸೌರಭ ಕಲಾ ಸಂಘ, ಬಾಪೂಜಿ ಸಮೂಹ ಸಂಸ್ಥೆಗಳು ಮತ್ತು ಕನ್ನಡ ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಾಪೂಜಿ ಸಂಸ್ಥೆಗಳ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಕಲಾ ಸಂಘ ಸಾಣೇಹಳ್ಳಿಯ ಶಿವಸಂಚಾರ ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಕಡೆಯಲ್ಲಿ ಪ್ರತಿ ವರ್ಷ ಜಾತ್ರೆ ಹಬ್ಬ ಹರಿದಿನಗಳಲ್ಲಿ ನಾಟಕ ಮತ್ತು ಯಕ್ಷಗಾನದ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿತು. ಆದರೆ ಈಗ ಅವುಗಳು ಸಹಾ ಕಡಿಮೆಯಾಗಿದೆ. ನಾಟಕ ಕಂಪನಿಗಳು ಬಂದಾಗ ಮಾತ್ರ ನಾಟಕಗಳನ್ನು ನೋಡಲು ಸಾಧ್ಯವಿದೆ. ಅವರು ಸಹಾ ಇಂದಿನ ದಿನಮಾನದಲ್ಲಿ ನಾಟಕಗಳ ಪ್ರದರ್ಶನ ಎನ್ನುವುದು ದುಬಾರಿಯಾಗಿದೆ.

ಕಲಾವಿದರಿಗೆ ವೇತನ ನೀಡದ ಪರಿಸ್ಥಿತಿ ನಿರ್ಮಾಣವಾಗಿದ್ದು ಅವರಿಗೆ ಊಟವನ್ನು ಹಾಕದ ರೀತಿಯಲ್ಲಿ ನಾಟಕ ಕಂಪನಿಗಳು ಇವೆ. ಒಂದು ಕಾಲದಲ್ಲಿ ನಾಟಕಕ್ಕೆ ಜನತೆ ಪ್ರೋತ್ಸಾಹ ನೀಡುತ್ತಿದ್ದರು. ಆದರೆ ಈಗ ಸಿನಿಮಾ, ಟಿ.ವಿ. ವಾಟ್ಸ್ ಆಪ್ ಗಳಿಂದಾಗಿ ಇವುಗಳು ದೂರವಾಗಿದೆ.

 

ಚಲನಚಿತ್ರದಿಂದಾಗಿ ನಾಟಕಗಳ ಪ್ರದರ್ಶನ ಕಡಿಮೆಯಾಗಿದೆ. ಇಲ್ಲಿಗೆ ಬರುವ ಪ್ರೇಕ್ಷಕರ ಸಂಖ್ಯೆಯೂ ಸಹಾ ಕಡಿಮೆಯಾಗಿದೆ ಎಂದು ನೂಂದು ನುಡಿದರು.

ಪ್ರಥಮವಾಗಿ ಕನ್ನಡ ನಾಟಕ ಬಂದರೂ ಸಹಾ ಈಗ ಇದು ಹಿಂದಿನ ಸ್ಥಾನವನ್ನು ಪಡೆದಿದೆ. ಈಗ ಮರಾಠಿ ನಾಟಕ ಪ್ರಥಮವಾಗಿ ಇದೆ. ಇದನ್ನು ನೋಡಲು ಜನತೆ ಮುಗಿ ಬೀಳುತ್ತಾರೆ. ಅಲ್ಲಿ ಅದಕ್ಕೆ ಅಷ್ಟೊಂದು ಸ್ಥಾನವನ್ನು ನೀಡಿದ್ದಾರೆ. ಇದರಿಂದ ಅಲ್ಲಿ ನಾಟಕಗಳು ಇಂದಿಗೂ ಸಹಾ ಉತ್ತಮವಾದ ಪ್ರದರ್ಶನವಾಗುತ್ತಿದೆ ಎಂದ ಅವರು ಮನೆಯಲ್ಲಿ ತಾಯಿಂದಿರು ಮಕ್ಕಳಿಗೆ ಪಾಠವನ್ನು ಹೇಳುವ ಸಮಯದಲ್ಲಿ ಟಿ.ವಿಯನ್ನು ನೋಡುತ್ತಾರೆ. ಇದರಿಂದ ಮಕ್ಕಳ ಮನಸ್ಸು ಟಿ.ವಿಯ ಕಡೆಗೆ ವಾಲುತ್ತದೆ. ಇದರಿಂದ ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಶ್ರೀ ಮುರುಘಾಮಠದ ಉಸ್ತುವಾರಿ ಪೀಠಾಧ್ಯಕ್ಷರಾದ ಶ್ರೀ ಬಸವಪ್ರಭು ಶ್ರೀಗಳು ಮಾತನಾಡಿ, ರಂಗಭೂಮಿ ಮಾನವನಿಗೆ ನೀತಿಯನ್ನು ಭೋಧಿಸುವ ಪಾಠಶಾಲೆಗಳಾಗಿವೆ.

ಸಾಣೇಹಳ್ಳಿ ಮತ್ತು ಜಮುರಾ ಕಲಾ ಲೋಕ ನಾಟಕಗಳನ್ನು ಪ್ರದರ್ಶನ ಮಾಡುವುದರ ಮೂಲಕ ಜನತೆಗೆ ಸಂದೇಶವನ್ನು ನೀಡುತ್ತಿವೆ. ಇಂದಿನ ಶಿಕ್ಷಣದಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುತ್ತಿಲ್ಲ, ಇಂದಿನ ಯುವ ಜನತೆಗೆ ಸಂಸ್ಕಾರ ಅಗತ್ಯವಾಗಿದೆ, ಅದನ್ನು ನಾವು ಕಲಿಸಬೇಕಿದೆ. ರಂಗಭೂಮಿಯ ಮೂಲಕ ಸಂಸ್ಕಾರವನ್ನು ಕಲಿಸಬೇಕಿದೆ. ಸಿನಿಮಾ ಮತ್ತು ಧಾರವಾಹಿಗಳು ಮಾನವರ ಮನಸ್ಸುಗಳನ್ನು ಒಡೆಯುತ್ತಿವೆ ಆದರೆ ರಂಗಭೂಮಿಯ ನಾಟಕಗಳು ಒಡೆದ ಮನಸ್ಸುಗಳನ್ನು ಒಂದುಗೂಡುವಂತೆ ಮಾಡುತ್ತಿವೆ ಎಂದರು.

ಬಾಪೂಜಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ವಿರೇಶ್ ರವರು ಸಹಾ ರಂಗಭೂಮಿಯ ಕಲಾವಿದರಾಗಿದ್ಧಾರೆ. ಅವರು ಸಹಾ ಅನೇಕ ನಾಟಕಗಳಲ್ಲಿ ಅಭಿನಯವನ್ನು ಮಾಡಿದ್ದಾರೆ ಸ್ವಾಮಿ ವಿವೇಕಾನಂದ ಮತ್ತು ಬಸವಣ್ಣನವರ ಪಾತ್ರವನ್ನು ಹಾಕಿದ್ದರು. ಉತ್ತಮವಾದ ರಂಗ ಪೋಷಕರು ಸಹಾ ಆಗಿದ್ದಾರೆ ಎಂದು ಶ್ರೀಗಳು ವಿರೇಶ್ ರವರ ಕಲೆಯನ್ನು ಪ್ರಶಂಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ.ಲೋಕೇಶ್ ಅಗಸನಕಟ್ಟೆ, ಪತ್ರಕರ್ತರಾದ ಉಜ್ಜನಪ್ಪ, ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ, ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುನೀತಾ ಮಲ್ಲಿಕಾರ್ಜನ್, ಡಾ.ಚಾಂದಿನಿ ಖಾಲಿದ್ ಮಹಡಿ ಶಿವಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಂ.ವಿರೇಶ್ ವಹಿಸಿದ್ದರು.

ಇದೇ ಸಂದರ್ಭದಲ್ಲಿ ನವೀನ್ ಮಂಡ್ಯ ನಿರ್ದೇಶನದ ಪ್ರೋ.ಎಸ್.ಜಿ. ಸಿದ್ದರಾಮಯ್ಯರವರ ಬಿಜ್ಜಳ ನ್ಯಾಯ ನಾಟಕ ಪ್ರದರ್ಶನವಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

Aus vs Ind 1st Test : ಶತಕದ ಸನಿಹದಲ್ಲಿ ಜೈಸ್ವಾಲ್ : ಎರಡನೇ ದಿನದ ಅಂತ್ಯಕ್ಕೆ ಭಾರತ 200 ರನ್‌ಗಳ ಮುನ್ನಡೆ…!

ಸುದ್ದಿಒನ್ | ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್, 2 ನೇ ದಿನ :  ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 218 ರನ್ ಮುನ್ನಡೆ ಸಾಧಿಸಿದೆ. ಶನಿವಾರದ ಎರಡನೇ ದಿನದಾಟದ ಅಂತ್ಯಕ್ಕೆ

ಚಿತ್ರದುರ್ಗ | ನವೆಂಬರ್ 27 ಮತ್ತು 28 ರಂದು ಬಾದರದಿನ್ನಿ ರಂಗೋತ್ಸವ 2024

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ನಗರದ ತರಾಸು ರಂಗ ಮಂದಿರದಲ್ಲಿ ನ.27ರಂದು ಸಂಜೆ 5.30ಕ್ಕೆ ಬಾದರದಿನ್ನಿ ಆಟ್ರ್ಸ್ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಆಶ್ರಯದಲ್ಲಿ “ ಬಾದರದಿನ್ನಿ ರಂಗೋತ್ಸವ

14 ತಿಂಗಳ ಮಗುವಿಗೆ ಯಶಸ್ವಿ ಹೃದಯ ಕಸಿ : ಬೆಂಗಳೂರಿನಲ್ಲಿ ವೈದ್ಯರ ಅಪರೂಪದ ಸಾಧನೆ..!

ಬೆಂಗಳೂರು : ಇಲ್ಲಿನ ನಾರಾಯಣ ಹೃದಯಾಲಯದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ 14 ತಿಂಗಳ ಮಗುವಿಗೆ ನಾರಾಯಣ ಆಸ್ಪತ್ರೆ ವೈದ್ಯರು ಹೃದಯ ಕಸಿ ಚಿಕಿತ್ಸೆ ಯಶಸ್ವಿಯಾಗಿ

error: Content is protected !!