Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾರ್ಚ್‌ 27ರಂದು ವಿಶ್ವ ರಂಗಭೂಮಿ ದಿನಾಚರಣೆ

Facebook
Twitter
Telegram
WhatsApp

 

ಚಿತ್ರದುರ್ಗ : ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ -2023 ಕಾರ್ಯಕ್ರಮವನ್ನು ಮಾರ್ಚ್ 27ರಂದು ಬೆಳಿಗ್ಗೆ 10-30ಕ್ಕೆ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದೆ.

ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಜಿ.ಎಸ್.ಉಜ್ಜಿನಪ್ಪ ಉದ್ಘಾಟಿಸುವರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ದಿನೇಶ್ ಗೌಡಗೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಶಿಕ್ಷಣದಲ್ಲಿ ರಂಗಭೂಮಿಯ ಪ್ರಸ್ತುತತೆ ವಿಷಯವಾಗಿ ಉಪನ್ಯಾಸ ನೀಡುವರು. ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಶಸಾಪ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮುಖ್ಯಅತಿಥಿಯಾಗಿ ಉಪಸ್ಥಿತರಿರುವರು.

ರಂಗ ನಿರ್ದೇಶಕ ಕೆಪಿಎಂ. ಗಣೇಶಯ್ಯ 2023ರ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಈಜಿಪ್ಟ್ ದೇಶದ ವಿಶ್ವವಿಖ್ಯಾತ ಅಭಿನೇತ್ರಿ ಸಮಿಹಾ ಅಯೌಬ್ ವಿರಚಿತ ರಂಗಸಂದೇಶವನ್ನು ವಾಚಿಸುವರು.

ರಂಗಸೌರಭ ಕಲಾವಿದರು ರಂಗ ಜಂಗಮ ಬಿ.ವಿ ಕಾರಂತ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಹಿರಿಯ ನಾಟಕಕಾರ ಚಂದ್ರಶೇಖರ ಕಂಬಾರ ಮುಂತಾದ ನಾಟಕಕಾರರ ಹಾಗೂ ಹೆಸರಾಂತ ನಿರ್ದೇಶಕರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಗೀತೆಗಳನ್ನು ಹಾಡುವರು.

ರಂಗಭೂಮಿ ಕಲಾವಿದರಾದ ಎಂ.ಕೆ.ಹರೀಶ್, ಪ್ರಕಾಶ್ ಬಾದರದಿನ್ನಿ, ಗಾಯಕ ಕಾಲ್ಕೆರೆ ಚಂದ್ರಪ್ಪ, ವಕೀಲ ಎಸ್.ವಿಜಯ್‍ಕುಮಾರ್, ಶ್ರೀನಿವಾಸ್‍ಮೂರ್ತಿ, ಮಧು.ಟಿ, ಶ್ರೀಕುಮಾರ್.ಡಿ, ನಾಗೇಂದ್ರಪ್ಪ, ಕಾನಾಮಡುಗು ಕರಿಯಣ್ಣ, ಗಾಯಕ ಡಿ.ಓ.ಮುರಾರ್ಜಿ, ನನ್ನಿವಾಳ ಹನುಮಂತಪ್ಪ, ಸಾಹಿತಿ ಹುರುಳಿ ಬಸವರಾಜ್, ಎಂ.ಆರ್.ದಾಸೇಗೌಡ, ಯಲ್ಲಪ್ಪ ಐಹೊಳೆ, ಚನ್ನಬಸಪ್ಪ, ಹಿರಿಯೂರು ಮಹಾಲಿಂಗಯ್ಯ, ಗಾಯಕರಾದ ಗಂಗಾಧರ.ಕೆ, ಮೆದೇಹಳ್ಳಿ ಅಂಜಿನಪ್ಪ, ಹಿಮಂತರಾಜು ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ರಂಗಸೌರಭ ಕಲಾ ಸಂಘದ ಕಾರ್ಯದರ್ಶಿ ಕೆಪಿಎಂ ಗಣೇಶಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!