ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ರಾಜ್ಯದ ಅರ್ಹ ಫಲಾನುಭವಿಗಳಿಗೆ ತಲಾ 2 ಸಾವಿರದಂತೆ ಧನ ಸಹಾಯ ಮಾಡುತ್ತಿದೆ. ಪ್ರಸಕ್ತ ಸಾಲಿನ ಯೋಜನೆಯ ಕಂತಿನ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇಂದು 975 ಕೋಟಿ ಹಣ ಬಿಡುಗಡೆಯಾಗುತ್ತಿದೆ.
2022-23ನೇ ಸಾಲಿನ ಎರಡನೇ ಕಂತಿನ ಹಣ ಇಂದು ಬಿಡುಗಡೆಯಾಗುತ್ತಿದ್ದು, ಸುಮಾರು ನಾಲ್ಕೂವರೆ ಮಿಲಿಯನ್ ಗಿಂತ ಹೆಚ್ಚಿನ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈ ಸಂಬಂಧ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಅರ್ಹ ರೈತರಾದ ಒಟ್ಟು 48,75,000 ಮಂದಿಗೆ 975 ಕೋಟಿ ಹಣ ಈ ಸಾಲಿನ ಎರಡನೇ ಕಂತಿನ ರೂಪದಲ್ಲಿ ಪಾವತಿಯಾಗಲಿದೆ ಎಂದು ತಿಳಿಸಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರ್ಷಕ್ಕೆ ಮೂರು ಕಂತಿನಲ್ಲಿ ಒಟ್ಟು 6 ಸಾವಿರ ಹಣ ಸಂದಾಯವಾಗಲಿದೆ. ರೈತರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಸರ್ಕಾರ ಈ ಯೋಜನೆಯನ್ಮು ಜಾರಿಗೆ ತಂದಿದೆ.