ಬೆಂಗಳೂರು: ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದಂತೆ ರಾಜಕೀಯ ವಿಚಾರಗಳು ಚರ್ಚೆಗೆ ಬರುತ್ತವೆ. ಇದೀಗ ಸಚಿವ ವಿ ಸೋಮಣ್ಣ ಅವರು ಸಿದ್ದರಾಮಯ್ಯ ಅವರ ವಿರುದ್ಧವಾಗಿ ಸ್ಪರ್ಧೆ ಮಾಡ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ಊಹಾಪೋಹಗಳಿಗೆಲ್ಲಾ ಸ್ವತಃ ಸೋಮಣ್ಣ ಅವರೇ ಉತ್ತರ ನೀಡಿದ್ದಾರೆ.
ಇತ್ತಿಚೆಗಷ್ಟೇ ವಿ ಸೋಮಣ್ಣ ಅವರ ಮನಸ್ತಾಪ ಶಮನವಾಗಿದೆ. ಪಕ್ಷ ಬಿಡುತ್ತಾರೆ ಎಂಬ ವಿಚಾರ ಹಬ್ಬಿದ್ದಾಗ ಸಿಎಂ ಬೊಮ್ಮಾಯಿ ಅವರೇ ಖುದ್ದು ಭೇಟಿ ಮಾಡಿ ಸಮಾಧಾನ ಮಾಡಿ ಬಂದಿದ್ದಾರೆ. ಈ ಬೆನ್ನಲ್ಲೇ ಚುನಾವಣಾ ಕ್ಷೇತ್ರದ ವಿಚಾರ ಸದ್ದು ಮಾಡಿತ್ತು. ಇದೀಗ ಈ ಬಗ್ಗೆ ಸೋಮಣ್ಣ ಮಾತನಾಡಿದ್ದು, ನಾನ್ಯಾಕರ ಸಿದ್ದರಾಮಯ್ಯ ವಿರುದ್ಧ ನಿಲ್ಲಲಿ ಎಂದಿದ್ದಾರೆ.
ನನ್ನ ಫೋಕಸ್ ಏನಿದ್ದರೂ ಚಾಮರಾಜಗನರ. ನಾನ್ಯಾಕೆ ವರುಣಾ ಕ್ಷೇತ್ರಕ್ಕೆ ಹೋಗಿ ಸ್ಪರ್ಧಿಸಲಿ. ನಾನ್ಯಾಕೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲಿ. ಹೈಕಮಾಂಡ್ ಹೊಣೆ ಕೊಟ್ಟಿದೆ ಅದನ್ನು ನಿಭಾಯಿಸುತ್ತೇನೆ. ಹೈಕಮಾಂಡ್ ಸೂಚಿಸಿದಂತೆ ನಾನು ಕೆಲಸ ಮಾಡ್ತೇನೆ. ಹನೂರು, ಗೋವಿಂದರಾಜನಗರ ಕ್ಷೇತ್ರಗಳು ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.