ಆಸ್ಟ್ರೇಲಿಯಾ ವಿರುದ್ದ ಇಂದು ನಡೆದ ಎರಡನೇಯ ಏಕದಿನ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಟೀಂ ಇಂಡಿಯಾ ಕೆಟ್ಟ ದಾಖಲೆಯನ್ನೂ ಬರೆದಿದೆ.
ವಿಶಾಖಪಟ್ಟಣದಲ್ಲಿ ಇಂದು (ಭಾನುವಾರ) ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 26 ಓವರ್ ಗಳಲ್ಲಿ 117 ರನ್ ಗಳಿಗೆ ಆಲೌಟಾಯಿತು.
ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯ ತಂಡ 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 121/0 ರನ್ ಗಳಿಸಿತು. ಕೊನೆಯ ಏಕದಿನ ಪಂದ್ಯ ಬುಧವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ.
ತಂಡವೊಂದು ಕೇವಲ 11 ಓವರ್‌ಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಓವರ್‌ಗಳಲ್ಲಿ ಏಕದಿನ ಪಂದ್ಯವನ್ನು ಗೆದ್ದಿರುವುದು ಇದೇ ಮೊದಲು.
2019 ರಲ್ಲಿ ಈ ದಾಖಲೆಯು ನ್ಯೂಜಿಲೆಂಡ್ ತಂಡದ ಹೆಸರಿನಲ್ಲಿದೆ. ಆ ವರ್ಷ ಭಾರತ ತಂಡ ನ್ಯೂಜಿಲೆಂಡ್ ಗೆ 93 ರನ್ ಗಳ ಗುರಿ ನೀಡಿತ್ತು. ಆ ತಂಡ 14.4 ಓವರ್ ಗಳಲ್ಲಿ ಅದನ್ನು ಭೇದಿಸಿತ್ತು. ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ 11 ಓವರ್ ಗಳಲ್ಲಿ ಕೆಟ್ಟ ದಾಖಲೆ ಮುರಿದು ಮತ್ತಷ್ಟು ಸುಧಾರಿಸಿದೆ. ಒಟ್ಟಾರೆಯಾಗಿ ಆಸ್ಟ್ರೇಲಿಯಾ ತಂಡಕ್ಕೆ ಇದು ಮೂರನೇ ಅತಿ ದೊಡ್ಡ ಗೆಲುವಾಗಿದೆ. ಭಾರತಕ್ಕೆ ಇದು ಹೀನಾಯ ಸೋಲು.
ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ 8 ಓವರ್ ಬೌಲ್ ಮಾಡಿ 5 ವಿಕೆಟ್ ಪಡೆದರು.ಬ್ಯಾಟಿಂಗ್ ನಲ್ಲಿ ಮಿಚೆಲ್ ಮಾರ್ಷ್ (ಔಟಾಗದೇ 66) ಮತ್ತು ಟ್ರಾವಿಸ್ ಹೆಡ್ (ಔಟಾಗದೆ 51) ಅರ್ಧ ಶತಕ ದಾಖಲಿಸಿದರು.
ಭಾರತದ ಪರ ವಿರಾಟ್ ಕೊಹ್ಲಿ (31) ಮಾತ್ರ ಗರಿಷ್ಠ ಸ್ಕೋರರ್ ಆಗಿದ್ದರು. ಭಾರತದ ಯಾವುದೇ ಬೌಲರ್‌ಗಳು ಕನಿಷ್ಠ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.