ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಒಂದು ಕಡೆ ಜನರ ಮನಸ್ಸಲ್ಲಿ ಚುನಾವಣೆ ಮುಗಿಯುವ ತನಕ ಗಟ್ಟಿಯಾಗಿ ನಿಲ್ಲಬೇಕು. ಬೇರೆ ಬೇರೆ ಪಕ್ಷಗಳ ಪ್ರಚಾರ, ಭರವಸೆ ಜೊತೆಗೆ ತಮ್ಮ ಪಕ್ಷವನ್ನು ಜನರ ತಲೆಯೊಳಗೆ ಬೇರೂವಂತೆ ಮಾಡಬೇಕು. ಮತ್ತೊಂದು ಕಡೆ ಮುನಿಸಿಕೊಂಡವರನ್ನು ಸಮಾಧಾನವೂ ಮಾಡಬೇಕು. ಇದಿ ಕೇವಲ ಜೆಡಿಎಸ್ ನದ್ದು ಮಾತ್ರವಲ್ಲ. ಎಲ್ಲಾ ಪಕ್ಷಗಳ ತಲೆ ನೋವು. ಆದ್ರೆ ಜೆಡಿಎಸ್ ಈ ಅಸಮಾಧಾನದ ಹೊಗೆಯನ್ನು ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ಈಗ ಬಿಜೆಪಿ ಕೂಡ ಕಮಲ ಅರಳಿಸುವ ಪ್ರಯತ್ನ ನಡೆಸುತ್ತಿದೆ. ಬರೀ ಪ್ರಚಾರದಿಂದ ಗೆಲುವು ಅಸಾಧ್ಯ ಎಂದು ಅರಿತಿರುವ ಬಿಜೆಪಿ, ಈಗಾಗಲೇ ಸುಮಲತಾ ಹಾಗೂ ಶಿವರಾಮೇಗೌಡ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದೆ. ಈ ಬೆನ್ನಲ್ಲೇ ಜೆಡಿಎಸ್ ನ ಮಂಜೇಗೌಡ ಅವರು ಕಾಂಗ್ರೆಸ್ ಅಥವಾ ಬಿಜೆಪಿ ಸೇರಲಿದ್ದಾರೆ ಎಂಬ ಗುಸುಗುಸು ಶುರುವಾಗಿತ್ತು. ಆದ್ರೆ ಆ ಬೇಸರ ಶಮನ ಮಾಡುವಲ್ಲಿ ಕುಮಾರಸ್ವಾಮಿ ಸಕ್ಸಸ್ ಆಗಿದ್ದಾರೆ.
ಕುಮಾರಸ್ವಾಮಿಯ ಸಂಧಾನವಾದ ಬಳಿಕ ಮಾತನಾಡಿದ ಮಂಜೇಗೌಡ ಅವರು, ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಮಾತ್ರ ಬಿಡಲ್ಲ. ಮತ್ತೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡ ಅವರಿಗೆ ಟಿಕೆಟ್ ನೀಡಿದೆ. ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡಲ್ಲ. ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡುವುದೇ ನಮ್ಮ ಗುರಿ ಎಂದಿದ್ದಾರೆ.