ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬಳ್ಳಾರಿ
ಬಳ್ಳಾರಿ, (ಮಾ.17) : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಬಿಸಲಹಳ್ಳಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆಯನ್ನು ಮಾರ್ಚ್ 18 ರಂದು ಕೈಗೆತ್ತಿಕೊಳ್ಳುತ್ತಿದೆ.
ಮಾ.18 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಈ ಕೇಂದ್ರದಿಂದ ಸರಬರಾಜಾಗುವ ಎಫ್-95 ಫೀಡರ್ ರೂಪನಗುಡಿ ಐಪಿ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್. ಎಫ್-96 ಫೀಡರ್ ರೂಪನಗುಡಿ ಎನ್‍ಜೆವೈ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್ ಗ್ರಾಮಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಮಾ. 19 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ ಗ್ರಾಮೀಣ ಜೆಸ್ಕಾಂನ 110/11ಕೆ.ವಿ ಮೀನಹಳ್ಳಿ ವಿದ್ಯುತ್ ಉಪಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಮಾ.19ರಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ಗ್ರಾಮೀಣ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: ಎಫ್-2 ಚಾಗನೂರು ಐಪಿ ಫೀಡರ್ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ ಕಾರೆಕಲ್ಲು, ಚಾಗನೂರು ಗ್ರಾಮಗಳು. ಎಫ್-1 ಮೀನಹಳ್ಳಿ/ಕೆ.ವೀರಾಪುರ ಎನ್.ಜೆ.ವೈ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ ಕಾರೆಕಲ್ಲು, ಚಾಗನೂರು ಗ್ರಾಮಗಳು. ಎಫ್-4 ಎ.ಟಿ.ಪಿ.ಎಸ್ ಚೆಳ್ಳಗುರ್ಕಿ ಮಾರ್ಗದ ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಗ್ರಾಮಗಳು. ಎಫ್-5 ಹಗರಿ ಐಪಿ ಫೀಡರ್ ಮಾರ್ಗದ ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಗ್ರಾಮಗಳು. ಜಾನಕಿ ಕಾರ್ಪೋ.ಪ್ರೈ.ಲಿ, ಬಸಾಯಿ ಸ್ಟೀಲ್ ಪ್ರೈ.ಲಿ, ಕ್ಲೀನ್ ಮ್ಯಾಕ್ಸ್ ಸೊಲಾರ್, ಕ್ಲೀನ್ ಸೊಲಾರ್, ಮೌರ್ಯ ಸೀಲಾಮ್ ಸೋಲಾರ್ ಐ.ಪಿ.ಪಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾ.20ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮಾ.17(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂನ 110/11ಕೆ.ವಿ ಮೋಕಾ ಉಪಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣೆ ಕೈಗೆತ್ತಿಕೊಳ್ಳುತ್ತಿರುವುದರಿಂದ 33/11ಕೆ.ವಿ ಯರ್ರಗುಡಿ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳಲ್ಲಿ ಮಾ.20ರಂದು ಬೆಳಗ್ಗೆ 11ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-1 ಬಿ.ಡಿ.ಹಳ್ಳಿ ಐಪಿ ಮಾರ್ಗದ ಮೋಕಾ ಬಿ.ಡಿ.ಹಳ್ಳಿ ಗ್ರಾಮಗಳು. ಎಫ್-2 ಜಿ.ಎನ್ ಹಳ್ಳಿ ಐಪಿ ಮಾರ್ಗದ ಗೋಟೂರು, ಕೆ.ಕೆ.ಹಾಳ್, ಮಸೀದಿಪುರ, ವಣೆನೂರು, ಗುಡುದೂರು ಗ್ರಾಮಗಳು. ಎಫ್-4 ಮೋಕಾ, ಶಿವಪುರ ಐಪಿ, ಎಫ್-5 ವಾಟರ್ ವಕ್ರ್ಸ್, ಎಫ್-12 ಬಸರಕೋಡು ಎನ್.ಜೆ.ವೈ ಮಾರ್ಗದ ಶಿವಪುರ, ಕಪ್ಪಗಲ್ಲು, ಸಿರುವಾರ, ಸಂಗನಕಲ್ಲು, ಚಾಗನೂರು, ವಾಟರ್ ವಕ್ರ್ಸ್, ಗೋಟೂರು, ಕೆ.ಕೆಹಾಳ್, ಮಸೀದಿಪುರ, ವಣೆನೂರು, ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಗ್ರಾಮಗಳು. ಎಫ್-13 ಬಸರಕೋಡು ಐಪಿ ಮಾರ್ಗದ ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಗ್ರಾಮ. ಎಫ್-14 ಕಪ್ಪಗಲ್ಲು ಮತ್ತು ಸೋಲಾರ್ ಮಾರ್ಗದ ಶಿವಪುರ, ಅಶೋಕ ನಗರ ಕ್ಯಾಂಪ್, ಕಪ್ಪಗಲ್ಲು, ಸಿರುವಾರ, ಚಾಗನೂರು ಗ್ರಾಮಗಳು. ಎಫ್-15 ಮೋಕಾ ಮತ್ತು ಸೋಲಾರ್ ಮಾರ್ಗದ ಮೋಕಾ ಮತ್ತು ಬಿ.ಡಿ.ಹಳ್ಳಿ ಗ್ರಾಮಗಳು. ಎಫ್-1 ಡಿ.ಎನ್.ಹಳ್ಳಿ ಐಪಿ ಮಾರ್ಗದ ಡಿಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಳ್ಳಿ, ಜಾಲಿಚಿಂತೆ ಗ್ರಾಮಗಳು. ಎಫ್-2 ಜಿ.ಎನ್ ಹಳ್ಳಿ ಐಪಿ ಮಾರ್ಗದ ಜಿ.ಎನ್.ಹಳ್ಳಿ, ತಂಬ್ರಳ್ಳಿ, ಗ್ರಾಮಗಳು. ಎಫ್-3 ಹಳೆ ಯರ್ರಗುಡಿ ಐಪಿ ಮಾರ್ಗದ ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು ಗ್ರಾಮಗಳು. ಎಫ್-5 ಸಿಂದುವಾಳ ಮತ್ತು ಸೋಲಾರ್ ಮಾರ್ಗದ ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮಗಳು. ಎಫ್-6 ಜಾಲಿಹಾಳ್ ಐಪಿ ಮಾರ್ಗದ ಎಂ.ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮಗಳು. 33ಕೆ.ವಿ ಮಾರ್ಗದ 33 ಕೆ.ವಿ ಎನ್.ಡಿ.ಪಿ.ಎಲ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.