ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜನಮಂಗಲ ಕಾರ್ಯಕ್ರಮದಡಿ ವಿಕಲಚೇತನರು, ನಾನಾ ರೀತಿಯ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಂತವರಿಗೆ ಅಗತ್ಯವಿರುವ ಸಲಕರಣೆಗಳನ್ನು ನೀಡಲಾಗುತ್ತಿದೆ ಎಂದು ಯೋಜನೆಯ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಗೀತಾ ತಿಳಿಸಿದರು.
ಪಾಶ್ರ್ವವಾಯುಗೆ ತುತ್ತಾಗಿರುವ ಎಪ್ಪತ್ತೈದು ವರ್ಷದ ವೃದ್ದೆ ಯಶೋಧಮ್ಮನಿಗೆ ಬುರುಜನಹಟ್ಟಿಯಲ್ಲಿರುವ ಅವರ ನಿವಾಸದಲ್ಲಿ ಗುರುವಾರ ವೀಲ್‍ಚೇರ್ ವಿತರಿಸಿ ಮಾತನಾಡಿದ ಶ್ರೀಮತಿ ಗೀತಾ ಹುಟ್ಟಿನಿಂದಲೇ ಅಂಗವಿಲರಾದವರು, ಪಾಶ್ರ್ವವಾಯು ಪೀಡಿತರು ಹೀಗೆ ನಾನಾ ಕಾರಣಗಳಿಂದ ಓಡಾಡುವ ಶಕ್ತಿಯನ್ನು ಕಳೆದುಕೊಂಡವರಿಗೆ ವೀಲ್‍ಚೇರ್, ವಾಟರ್ ಬೆಡ್, ವಾಕಿಂಗ್ ಸ್ಟಿಕ್ ಇನ್ನು ಅನೇಕ ಅಗತ್ಯಕ್ಕೆ ತಕ್ಕಂತೆ ಸಲಕರಣೆಗಳನ್ನು ನೀಡಲಾಗುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಶ್ರೀಮತಿ ಹೇಮಾವತಿ ಹೆಗಡೆರವರ ಕನಸಿನಂತೆ ವಾತ್ಸಲ್ಯ ಯೋಜನೆಯಡಿ ನಿರ್ಗತಿಕರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದರ ಜೊತೆ ಚಾಪೆ, ಬಟ್ಟೆ, ಹೊದಿಕೆ, ಪಾತ್ರೆ ಸಾಮಾನುಗಳನ್ನು ವಿತರಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯೆಂದರೆ ಬರಿ ಸಂಘ ಸಾಲ ಕೊಡುವುದಷ್ಟೆ ಅಲ್ಲ. ಇಂತಹ ಮಹಾತ್ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.
ಕಳೆದ ವರ್ಷ 150 ಕುಟುಂಬಗಳಿಗೆ ಇಂತಹ ಸಲಕರಣೆಗಳನ್ನು ನೀಡಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ತಿಳಿಸಿದರು.
ಯೋಜನಾಧಿಕಾರಿ ಶಶಿಧರ್, ವ್ಯವಸ್ಥಾಪಕ ಗಣೇಶ್, ತಾಲ್ಲೂಕು ಯೋಜನಾಧಿಕಾರಿ ಅಶೋಕ್, ಸಮನ್ವಯಾಧಿಕಾರಿ ಸುಧ, ನಗರಸಭೆ ಸದಸ್ಯೆ ಪಿ.ಕೆ.ಮೀನಾಕ್ಷಿ, ಚಂದ್ರಮ್ಮ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.