ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಕೂಡ ರಾಜ್ಯಕ್ಕೆ ಬಂದು ಎಲ್ಲಾ ಸಿದ್ಧತೆಗಳನ್ನು ನೋಡಿಕೊಂಡು ಹೋಗಿದೆ. ಈಗ ಎಲ್ಲರ ಚಿತ್ತ ನೆಟ್ಟಿರೋದು ಮೂರು ಪಕ್ಷದಿಂದ ಯಾವ್ಯಾವ ಕ್ಷೇತ್ರಕ್ಕೆ ಯಾವ್ಯಾವ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ ಎಂಬುದು. ಈಗ ಕಾಂಗ್ರೆಸ್ ಬಲ್ಲ ಮೂಲಗಳಿಂದ ಅಭ್ಯರ್ಥಿಗಳ ಹೆಸರು ಬಹಿರಂಗವಾಗಿದೆ.
ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯ ಸಭೆ ನಾಳೆ ನಡೆಯಲಿದ್ದು, ಸಭೆ ಬಳಿಕ ವಿಧಾನಸಭಾ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಲಿದ್ದಾರೆ. 224 ಕ್ಷೇತ್ರಗಳಲ್ಲಿ ಪೂರ್ತಿ ಕ್ಷೇತ್ರದಲ್ಲಿ ಸ್ಪರ್ಧೆಯೊಡ್ಡಲಿದ್ದಾರೆ. ಆದ್ರೆ ನಾಳೆ 150ಕ್ಕೂ ಹೆಚ್ಚು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗುತ್ತದೆ.
*ಶಿರಾ – ಟಿಬಿ ಜಯಚಂದ್ರ
* ಕೊರಟಗೆರೆ- ಜಿ ಪರಮೇಶ್ವರ್
* ಮಧುಗಿರಿ – ಕೆ ಎನ್ ರಾಜಣ್ಣ
* ರಾಣೆಬೆನ್ನೂರು – ಕೆಬಿ ಕೋಳಿವಾಡ
* ಚಿತ್ತಾಪುರ – ಪ್ರಿಯಾಂಕ್ ಖರ್ಗೆ
* ಹಿರಿಯೂರು – ಸುಧಾಕರ್
* ಚಳ್ಳಕೆರೆ – ಟಿ ರಘುಮೂರ್ತಿ
* ಹೊಳಲ್ಕೆರೆ – ಹೆಚ್ ಆಂಜನೇಯ
* ಆನೇಕಲ್ – ಶಿವಣ್ಣ
* ರಾಜರಾಜೇಶ್ವರಿ ನಗರ – ಕುಸುಮಾ
* ಗೋವಿಂದರಾಜನಗರ – ಪ್ರಿಯಾಕೃಷ್ಣ
* ಶಾಂತಿನಗರ – ಹ್ಯಾರೀಸ್
* ಬಿಟಿಎಂ ಲೇಔಟ್ ; ರಾಮಲಿಂಗಾ ರೆಡ್ಡಿ
* ಜಯನಗರ: ಸೌಮ್ಯಾ ರೆಡ್ಡಿ
* ಹೆಬ್ಬಾಳ – ಬೈರತಿ ಸುರೇಶ್
* ಬ್ಯಾಟರಾಯನಪುರ – ಕೃಷ್ಣಬೈರೇಗೌಡ
* ಬಳ್ಳಾರಿ ಗ್ರಾಮೀಣ – ನಾಗೇಂದ್ರ
* ಕಂಪ್ಲಿ – ಗಣೇಶ್
* ಸಂಡೂರು – ಇ ತುಕರಾಂ
* ಭದ್ರಾವತಿ – ಬಿ ಕೆ ಸಂಗಮೇಶ್
* ದಾವಣಗೆರೆ ದಕ್ಷಿಣ – ಶಾಮನೂರು ಶಿವಶಂಕರಪ್ಪ
*ದಾವಣಗೆರೆ ಉತ್ತರ – ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಹಲವರ ಹೆಸರು ಮತ್ತು ಕ್ಷೇತ್ರದ ಪಟ್ಟಿ ಬಿಡುಗಡೆ ಮಾಡಲಿದ್ದಾರೆ.