ಚಿಕ್ಕಮಗಳೂರು: ಸಿಟಿ ರವಿ ಜಿಲ್ಲೆಯಲ್ಲಿ ಸಾಕಷ್ಟು ಓಡಾಡುತ್ತಾ ಇರುತ್ತಾರೆ. ಆದ್ರೆ ಈಗ ಅಭಿವೃದ್ಧಿ ವಿಚಾರವಾಗಿ ಜನ ಪ್ರಶ್ನೆ ಮಾಡುವಂತೆ ಮಾಡಿಕೊಂಡಿದ್ದಾರೆ. ಉದ್ದೆಬೋರನಹಳ್ಳಿ ಜನ ಸಿಟಿ ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮಯ್ಯ ಅವರು ಈಗಾಗಲೇ ಬಿಜೆಪಿ ತೊರೆದು ಸಿಟಿ ರವಿ ವಿರುದ್ಧ ಕೆಂಡಕಾರಿ, ಕಾಂಗ್ರೆಸ್ ಗೆ ಸೇರಿದ್ದಾರೆ. ಹೇಳಿ ಕೇಳಿ ಲಿಂಗಾಯತರೇ ಹೆಚ್ಚಾಗಿರುವಂತ ಕ್ಷೇತ್ರ ಉದ್ದೆಬೋರನಹಳ್ಳಿ. ಹೀಗಾಗಿ ಅಲ್ಲಿನ ಮತಗಳನ್ನು ಸೆಳೆಯುವುದಕ್ಕೆ ಸಿಟಿ ರವಿ ಪ್ರಯತ್ನ ನಡೆಸುತ್ತಿದ್ದು, ತನ್ನ ಬಾಮೈದನನ್ನು ಮುಂದೆ ಬಿಟ್ಟು, ಸಭೆಗಳನ್ನು ನಡೆಸುತ್ತಿದ್ದಾರೆ.
ಉದ್ದೆಬೋರನಹಳ್ಳಿ ಸಿಟಿ ರವಿ ಪ್ರಚಾರ ಸಭೆಯನ್ನು, ಸಿಟಿ ರವಿ ಪರವಾಗಿ ಬಾಮೈದ ಸಭೆಗೆ ಮುಂದಾಗಿದ್ದರು. ಈ ವೇಳೆ ಅಲ್ಲಿನ ಜನ ರೊಚ್ಚಿಗೆದ್ದಿದ್ದಾರೆ. ಲಿಂಗಾಯತರ ಅಭಿವೃದ್ಧಿಗೆ ಸಿಟಿ ರವಿ ಕೊಟ್ಟ ಕೊಡುಗೆ ಏನು..? ಅಭಿವೃದ್ದಿ ಮಾಡುವುದಕ್ಕೆ ಇಷ್ಟು ವರ್ಷ ಬೇಕಾಯ್ತಾ..? ಇಷ್ಟು ವರ್ಷ ಎಲ್ಲಿ ಹೋಗಿದ್ರಿ. ಈಗ ಗ್ರಾಮಕ್ಕೆ ಬಂದಿದ್ದೀರಾ..? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಇತ್ತಿಚೆಗೆ ಗ್ರಾಮದ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಲಾಗಿತ್ತು. ಆಗ ಸೀರೆ ಯಾರಿಗೆ ಬೇಕು. ಸೀರೆ ತೆಗೆದುಕೊಳ್ಳುವುದಕ್ಕೆ ದೇವರು ಶಕ್ತಿ ಕೊಟ್ಟಿದ್ದಾರೆ. ಸೀರೆ ಬೇಡ ಮೊದಲು ಊರು ಉದ್ಧಾರ ಮಾಡಿ ಎಂದು ಜನ ಬಿಜೆಪಿ ಕೊಟ್ಟ ಸೀರೆಯನ್ನೇ ಸುಟ್ಟು ಹಾಕಿತ್ತು. ಈಗ ನೇರ ನೇರವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.