ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ತೀವ್ರ ರಕ್ತಸ್ರಾವದಿಂದ ಹಠಾತ್ ನಿಧನರಾಗಿದ್ದಾರೆ. ಇಂದು ಅವರ ಹುಟ್ಟೂರಿನಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ಅವರ ನಿಧನ ಬೆನ್ಮಲ್ಲೇ ಟಿಕೆಟ್ ಚರ್ಚೆ ಶುರುವಾಗಿದೆ. ನಿನ್ನೆಯಷ್ಟೇ ರಣದೀಪ್ ಸುರ್ಜೆವಾಲ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಮುಂದೆಯೇ ಧ್ರುವ ನಾರಾಯಣ್ ಅವರ ಮಗನಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದರು.
ಧ್ರುವ ನಾರಾಯಣ್ ನಂಜನಗೂಡಿನ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಟಿನರಸೀಪುರದಿಂದ ಮಗನಿಗೆ ಟಿಕೆಟ್ ಬಯಸಿದ್ದರು. ಹೆಚ್ ಸಿ ಮಹದೇವಪ್ಪ ಅವರು ಕೂಡ ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಒಂದೇ ಕುಟುಂಬದಲ್ಲಿ ಎರಡು ಕಡೆಗೆ ಇಬ್ಬರಿಗರ ಟಿಕೆಟ್ ಕೊಡುವುದು ಬಹಳ ಕಷ್ಟ. ಅದರ ಬದಲಿಗೆ ಟಿ ನರಸೀಪುರದಿಂದ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು. ಈಗ ಹಠಾತ್ ಧ್ರುವ ನಾರಾಯಣ್ ನಿಧನವಾಗಿದೆ. ಈ ಬೆನ್ನಲ್ಲೇ ನಂಜನಗೂಡು ಟಿಕೆಟ್ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಚರ್ಚೆ ನಡೆಯುತ್ತಿದೆ.
ಧ್ರುವ ನಾರಾಯಣ್ ಅವರ ಮಗನನ್ನು ಕಾರ್ಯಕರ್ತರು, ಬೆಂಬಲಿಗರು ರಾಜಕೀಯಕ್ಕೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಗಮನಕ್ಕೂ ಇದನ್ನ ತಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಮಹದೇವಪ್ಪ ಅವರಿಗಾ..? ಧ್ರುವ ನಾರಾಯಣ್ ಅವರ ಮಗನಿಗಾ ಎಂಬುದೇ ಪ್ರಶ್ನೆಯಾಗಿದೆ.