Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಳ್ಳಕೆರೆ ಕ್ಷೇತ್ರದ ಯುವ ಮತದಾರರ ಬೆಂಬಲ ಅಭಿವೃದ್ಧಿಗೆ : ಶಾಸಕ ಟಿ.ರಘುಮೂರ್ತಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮಾ.11) : ಚಳ್ಳಕೆರೆ ಕ್ಷೇತ್ರದ ಜನರು ಬುದ್ದಿವಂತ  ಮತದಾರರಾಗಿದ್ದು ಇಡೀ ಕ್ಷೇತ್ರದಲ್ಲಿ ಸಾವಿರಾರು ಯುವಕರು ಅಭಿವೃದ್ಧಿ ಮೆಚ್ಚಿ ಬೆಂಬಲಿಸುತ್ತಿರವುದು ಪಕ್ಷಕ್ಕೆ  ಬಲ ತಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ತಾಲೂಕಿನ  ತುರುವನೂರು ಹೋಬಳಿಯ ಮುದ್ದಾಪುರ ಗ್ರಾಮದಲ್ಲಿ   ಶಾಸಕರ ಸಮ್ಮುಖದಲ್ಲಿ ವಿವಿಧ ಹಳ್ಳಿಗಳ  ನೂರಾರು ಯುವಕರು ಕಾಂಗ್ರೆಸ್  ಪಕ್ಷಕ್ಕೆ  ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ದೇಶದಲ್ಲಿ ಬದಲಾವಣೆ ಮಾಡುವ ಶಕ್ತಿ ಯುವ  ಸಮೂಹಕ್ಕೆ ಇದೆ. ಯುವಕರು ಚಳ್ಳಕೆರೆ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ನೀಡುವ ಕೊಡುಗೆಯಿಂದ ಆಗಿರುವ ಅನುಕೂಲವನ್ನು ಪ್ರತಿ ಹಳ್ಳಿಯಲ್ಲಿ ನನಗೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂಜಿನಿಯರಿಂಗ್ ಕಾಲೇಜು, ಜಿಟಿಟಿಸಿ ಕಾಲೇಜು, ತುರುವನೂರು ಕಾಲೇಜಿನ ಸ್ಥಳಾಂತರ ವಿಚಾರದಲ್ಲಿ ನಾನು ಮಾಡಿದ ಹೋರಾಟಕ್ಕೆ ಎಲ್ಲಾ ಯುವಕರು ಬೆಂಬಲಿಸಿದ್ದು ಜನರು ನೋಡಿದ್ದಾರೆ. ತುರುವನೂರು ಸರ್ಕಾರಿ ಕಾಲೇಜು ಉಳಿಸಿಕೊಂಡು ಅಲ್ಲಿಗೆ ಹೆಚ್ಚಿನ ಕೋರ್ಸ್ ಗಳನ್ನು ತರುವುದಕ್ಕೆ ನಾನು ಶ್ರಮಿಸಿದ್ದೇನೆ ಎಂದರು.

ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ಭರವಸೆ ನೀಡುವುದು ಸಹಜ. ಆದರೆ ಯುವಕರು ಅತಿ ಬುದ್ದಿವಂತರಾಗಿದ್ದು ಯಾರು ಏನು ಹೇಳಿದರು ಅಭಿವೃದ್ಧಿ ಪರ ಮತ ಚಲಾಯಿಸುತ್ತಾರೆ ಎಂಬ ನಂಬಿಕೆ ನನಗಿದೆ. ನಾನು ಯುವಕ ಸಮೂಹಕ್ಕೆ ಅಗತ್ಯ ಇರುವ ಎಲ್ಲಾವನ್ನು ಹಂತ ಹಂತವಾಗಿ ದೂರದೃಷ್ಟಿ ಆಲೋಚನೆ ಮಾಡುತ್ತ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ.  ಪ್ರತಿ ಹಳ್ಳಿಯಲ್ಲಿ ಪಕ್ಷಾತೀತವಾಗಿ ಯುವಕರು ನನ್ನನ್ನು ಬೆಂಬಲಿಸುತ್ತಿದ್ದಾರೆ.ಯಾವುದೇ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳದ ವಿದ್ಯಾವಂತ  ಯುವಕರು ಸ್ವ ಇಚ್ಛೆಯಿಂದ ಅಣ್ಣ ನಿಮ್ಮ ಪರವಾಗಿ ನಾವು ಕೆಲಸಮಾಡುತ್ತೇವೆ ಎಂಬ ಅಭಯ ನೀಡಿ ಕ್ಷೇತ್ರದಾದ್ಯಂತ ನನ್ನ ಪರ ಕೆಲಸ ಮಾಡಿತ್ತಿದ್ದು ಅವರ ಕೆಲಸಕ್ಕೆ ನಾನು ಸದಾ ಋಣಿಯಾಗಿರುತ್ತೇನೆ ಎಂದರು.

ಚಳ್ಳಕೆರೆಯ ಅಭಿವೃದ್ಧಿ ಮೆಚ್ಚಿ ಕೆಲವು ಹಳ್ಳಿಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ.ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ ಜನಸೇವೆ ಬಂದಿದ್ದೇನೆ.ಜನರ ಮಧ್ಯೆ ಸದಾ ಇದ್ದು ಕೆಲಸ ಮಾಡುತ್ತೇನೆ ಅಷ್ಟೇ. ನನ್ನ ಕೆಲಸ ಜನರ ಎಲ್ಲವನ್ನು ತಿರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ತುರುವನೂರು ಹೋಬಳಿಯ ಮುದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದಾಪುರ, ಮುದ್ದಾಪುರ ಹೊಸಹಟ್ಟಿ, ಮುದ್ದಾಪುರ ಮ್ಯಾಸರಹಟ್ಟಿ, ಸೂರೇನಹಳ್ಳಿ, ಗೊಲ್ಲರಹಟ್ಟಿ, ಸಿದ್ದವನದುರ್ಗ, ಚಿಕ್ಕಬಿಗೆರೆ, ಹಿರೇ ಕಬ್ಬಿಗೆರೆ, ಗೊಲ್ಲರಟ್ಟಿಗಳ ಯುವಕರು ಹಾಗೂ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಆಧರಿಸಿ ಮತ್ತು  ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ  ಅಧಿಕೃತವಾಗಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಪ್ಪ, ಮಾಜಿ  ಜಿ.ಪಂ. ಸದಸ್ಯ  ಬಾಬುರೆಡ್ಡಿ, ಗ್ರಾಮ ಪಂಚಾಯತಿ  ಸದಸ್ಯರುಗಳು, ಮುಖಂಡರು, ಯುವಕರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು

ಭಾಷಣದಲ್ಲಿ ಯಡವಟ್ಟು : ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕುಮಾರಸ್ವಾಮಿ ದೂರು.. ಎಫ್ಐಆರ್ ದಾಖಲು..!

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಬಿಜೆಪಿ ಅದ್ಯಾವಾಗ ಮತ್ತೆ ಪ್ರಹ್ಲಾದ್ ಜೋಶಿ ಅವರಿಗೇನೆ ಟಿಕೆಟ್ ಕೊಟ್ಟಿತೇ ಅಂದಿನಿಂದಾನೇ ದಿಂಗಾಲೇಶ್ವರ ಸ್ವಾಮೀಜಿಗೆ ಬೇಸರ ಉಂಟಾಗಿತ್ತು. ಅಭ್ಯರ್ಥಿಯನ್ನು ಬದಲಾಯಿಸಿ ಎಂದು ಮನವಿ ಕೂಡ ಅಭ್ಯರ್ಥಿಯ ಬದಲಾವಣೆ

error: Content is protected !!