ಕಾಂಗ್ರೆಸ್ ಗೆ ಚುನಾವಣೆ ಹೊತ್ತಲ್ಲಿ ದೊಡ್ಡ ಆಘಾತವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ನಿಧನರಾಗಿದ್ದಾರೆ. ಮೈಸೂರಿನ ಸಿಆರ್ ಎಂಎಸ್ ಆಸ್ಪತ್ರೆಯಲ್ಲಿ ಮಾಜಿ ಸಂಸದ ಧ್ರುವನಾರಾಯಣ್ ಅಸುನೀಗಿದ್ದಾರೆ.
ಧ್ರುವನಾರಾಯಣ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಯ ವೈದ್ಯರು ಮನೆಗೆ ದೌಡಾಯಿಸಿದ್ದಾರೆ. ವೈದ್ಯ ಡಾ.ಮಂಜುನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಧ್ರುವನಾರಾಯಣ್ ಅವರು ಮಂಚದಿಂದ ಕೆಳಗೆ ಬಿದ್ದು ರಕ್ತವಾಂತಿ ಮಾಡಿಕೊಂಡಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮನೆಯಲ್ಲಿ ಸುಮಾರು ಅರ್ಧ ಗಂಟೆಯಿಂದ ರಕ್ತವಾಂತಿ ಮಾಡಿಕೊಂಡಿದ್ದರು. ಚಿಕಿತ್ಸೆ ನೀಡಲು ಎಷ್ಟೇ ಪ್ರಯತ್ನ ಪಟ್ಟರು ಸರಿಯಾಗಿಲ್ಲ.ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ಅಲ್ಲಿಯೂ ರಕ್ತವಾಂತಿ ಮಾಡಿಕೊಂಡರು. ಚಿಕಿತ್ಸೆ ಫಲಿಸಲೇ ಇಲ್ಲ ಅಂತ ವೈದ್ಯರು ತಿಳಿಸಿದ್ದಾರೆ.
ಧ್ರುವನಾರಾಯಣ್ ಅವರ ಅಂತ್ಯಕ್ರಿಯೆ ನಾಳೆ ಹುಟ್ಟೂರು ಚಾಮರಾಜನಗರದ ಹೆಗ್ಗವಾಡಿಯಲ್ಲಿ ನಡೆಯಲಿದೆ. ಹಳೆ ಮೈಸೂರು ಭಾಗದ ಪ್ರಬಲ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದರು ಧ್ರುವ ನಾರಾಯಣ್. ಆದ್ರೆ ಇಂದು ಆ ಪ್ರಬಲ ಕೊಂಡಿಯೇ ಕಳಚಿದೆ.