ಚಿಕ್ಕಬಳ್ಳಾಪುರ: ಕೆಲವು ತಿಂಗಳುಗಳಿಂದ ಹಲವು ಸಮುದಾಯದವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಈಗ ಬಲಿಜ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸಚಿವ ಸುಧಾಕರ್ ಭರವಸೆ ನೀಡಿದ್ದಾರೆ.
ಇಂದು ಯೋಗಿ ನಾರೇಯಣ ಯತೀಂದ್ರ ಅವರ ಜನ್ಮ ದಿನೋತ್ಸವ ಆಚರಣೆ ಹಿನ್ನೆಲೆ ಮಾತನಾಡಿದ ಸಚಿವ ಸುಧಾಕರ್, ಇನ್ನು ಒಂದು ವಾರದಲ್ಲಿ ಬಲಿಜ ಸಮುದಾಯದ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುತ್ತೇವೆ. ಮುಂದೆ ರಾಜ್ಯದಲ್ಲಿ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಖಂಡಿತವಾಗಿಯೂ ಬಲಿಜ ಸಮುದಾಯಕ್ಕೆ ಉದ್ಯೋಗದಲ್ಲಿ 2ಎ ಮೀಸಲಾತಿ ನೀಡುತ್ತೇವೆ.
ಪ್ರಸ್ತುತ 2ಎ ಮೀಸಲಾತಿಗಾಗಿ ದೊಡ್ಡ ದೊಡ್ಡ ಸಮುದಾಯಗಳು ಹೋರಾಟ ನಡೆಸುತ್ತಿವೆ. ಅಷ್ಟೇ ಅಲ್ಲ ಬಲಿಜ ಸಮದಾಯಕ್ಕೆ 8 ಕೋಟಿ ಮೌಲ್ಯದ ಒಂದು ಎಕರೆ ಜಮೀನನ್ನು ನೀಡುತ್ತೇವೆ. ರಾಜ್ಯದಲ್ಲಿ ಬಲಿಜ ಸಮುದಾಯ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಮುಂದಿನ ಒಂದು ವಾರದಲ್ಲಿ ಬಲಿಜ ಸಮುದಾಯದ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.