ಬೆಂಗಳೂರು: ಶಾಸಕ ಮಾಡಳು ವಿರೂಪಾಕ್ಷಪ್ಪನ ಮಗ ಮಾಡಾಳು ಪ್ರಶಾಂತ್ ಒಂದಲ್ಲ ಎರಡಲ್ಲ 40 ಲಕ್ಷ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ತಗಲಾಕಿಕೊಂಡಿದ್ದ. ಪ್ರಶಾಂತ್ ಅವ್ಯವಹಾರದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರು ಎ1 ಆರೋಪಿಯಾಗಿದ್ದರು. ಅರೆಸ್ಟ್ ಆಗುವ ಭೀತಿಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ಮಾಡಾಳು ವಿರೂಪಾಕ್ಷಪ್ಪರಿಗೆ ಕೋರ್ಟ್ ರಿಲೀಫ್ ನೀಡಿದೆ.
ಮಾಡಾಳು ವಿರೂಪಾಕ್ಷಪ್ಪ ಅವರ ಮದ್ಯಂತರ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆದಿದ್ದು, ಮದ್ಯಂತರ ಜಾಮೀನು ಮಂಜೂರಾಗಿದೆ. ಆದ್ರೆ 48 ಗಂಟೆಗಳ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಮತ್ತು 5 ಲಕ್ಷ ಬಾಂಡ್ ಮತ್ತು ಇಬ್ಬರ ಶ್ಯೂರಿಟಿಯನ್ನು ಕೋರ್ಟ್ ಕೇಳಿದೆ.
ಮಗನ ಅವ್ಯವಹಾರದಲ್ಲಿ ಎ1 ಆರೋಪಿಯಾಗಿದ್ದ ವಿರೂಪಾಕ್ಷಪ್ಪ ಲೋಕಾಯುಕ್ತ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಲುಕ್ ಔಟ್ ನೋಟೀಸ್ ಕೂಡ ಜಾರಿಯಾಗಿತ್ತು. ಹೀಗಾಗಿ ತುರ್ತು ವಿಚಾರಣೆ ನಡೆಸಲು ಕೋರಿದ್ದರು. ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇಂದು ಜಾಮೀನು ನೀಡಿರುವ ಕೋರ್ಟ್, ವಿಚಾರಣೆಗೆ ಹಾಜರಾಗುವುದಕ್ಕೆ ಡೆಡ್ ಲೈನ್ ನೀಡಿದೆ.