Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಉದ್ಯೋಗ ಸೃಷ್ಟಿಸಲು ಐಟಿ ಕಂಪನಿಗಳು ಸಹಕಾರಿ : ಸಂಸದ ಜಿ.ಎಂ.ಸಿದ್ದೇಶ್ವರ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದಾವಣಗೆರೆ

ದಾವಣಗೆರೆ; (ಫೆ .06) : ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಐ.ಟಿ ಕಂಪನಿಗಳು ಸಹಕಾರಿ ಎಂದು ಲೋಕಸಭಾ ಸಂಸದರಾದ ಜಿ.ಎಂ ಸಿದ್ದೇಶ್ವರ ಅವರು ಹೇಳಿದರು.

ನಗರದ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಲ್ಲಿ ಯು. ಕೆ ಇನ್ಫೋಸೈಟ್ ಕನ್ಸಲ್ಟಿಂಗ್ ಗ್ರೂಪ್‍ನ  ಇನ್ನೋವೇಷನ್ ಲ್ಯಾಬ್ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ  ಐ.ಟಿ ಕಂಪನಿ ಸ್ಥಾಪಿಸಿರುವುದು ಸಂತಸ ತಂದಿದೆ. ಐಟಿ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕು ಹಾಗೂ ಹೆಚ್ಚಿನ ಎಂ.ಎನ್.ಸಿ ಕಂಪನಿಗಳೂ ಆರಂಭವಾಗಬೇಕು ಎಂದರು.

ಲಂಡನ್ ಇನ್ಫೋಸೈಟ್ ಕನ್ಸಲ್ಟಿಂಗ್ ಸ್ಥಾಪಕ ವೀರೇಶ್ .ಕೆ ಬೆಳ್ಳೂಡಿ ಮಾತನಾಡಿ, ಕಂಪನಿಯು ಲಂಡನ್‍ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು,  ಜರ್ಮನಿ, ಭಾರತ, ಮಲೇಷಿಯಾ, ಸಿಂಗಾಪುರ್ ಮತ್ತು ಹಾಂಗ್ ಕಾಂಗ್‍ನಲ್ಲಿ 10 ವರ್ಷಗಳಿಂದ ಕಚೇರಿ ಕಾರ್ಯಾಚರಣೆ ನಡೆಸುತ್ತಿವೆ. ಇದೀಗ ಜಿಲ್ಲೆಯಲ್ಲಿ (ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ) ನಲ್ಲಿ ತನ್ನ ಇನ್ನೋವೇಶನ್ ಲ್ಯಾಬ್  ತೆರೆಯುತ್ತಿದೆ.ಇದು ಜಿಲ್ಲೆಯಲ್ಲಿ ಮೊದಲನೇ ಎಂ.ಎನ್.ಸಿ ಕಂಪನಿಯಾಗಿದೆ ಎಂದರು.

ಕಂಪನಿಯ ವಿಶಾಲ ಉದ್ದೇಶಗಳು ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಮಾಡಿ ಸಾಗರೋತ್ತರ ಗ್ರಾಹಕರ ಅಗತ್ಯಗಳನ್ನು ಬೆಂಬಲಿಸುವ ಉದ್ದೇಶ ಹೊಂದಿದೆ. ಇನ್ಫೋಸೈಟ್ ಕನ್ಸಲ್ಟಿಂಗ್ ಎನ್ನುವುದು ಕಂಪನಿಯು ಎಸ್.ಎ.ಪಿ ಅನುಷ್ಠಾನ ರೋಲ್‍ಔಟ್‍ಗಳು, ಅಭಿವೃದ್ಧಿ ಮತ್ತು ಬೆಂಬಲ ಸೇವೆಗಳಲ್ಲಿ ಪರಿಣತಿಯನ್ನು ಹೊಂದಿದ್ದು, ಇದು ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಡಿಜಿಟಲೀಕರಣಕ್ಕೆ  ಸಹಾಯ ಮಾಡುತ್ತದೆ ಎಂದರು.

ಇನ್ನೋವೇಶನ್ ಲ್ಯಾಬ್ ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಎಂ.ಬಿ.ಎ ಪದವೀಧರರು ಹಾಗೂ ಅನುಭವಿ ವೃತ್ತಿಪರರನ್ನು ನೇಮಿಸಿಕೊಂಡು ಸುತ್ತಮುತ್ತಲಿನ ನಗರಗಳಲ್ಲಿ ಸ್ಥಳೀಯವಾಗಿ  ಉದ್ಯೋಗ ಸೃಷ್ಟಿಸುವ ಮೂಲಕ ಮೆಟ್ರೋ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ ವೈಯಕ್ತಿಕವಾಗಿ  ಅಭಿವೃದ್ಧಿ  ಹೊಂದಲು ಅತ್ಯುತ್ತಮ ಅವಕಾಶಗಳನ್ನು ನೀಡುತ್ತದೆ.  ಇನ್ಫೋಸೈಟ್ ಕನ್ಸಲ್ಟಿಂಗ್ ವಿಶ್ವ ದರ್ಜೆಯ ವೃತ್ತಿಜೀವನ, ಅಂತರರಾಷ್ಟ್ರೀಯ ಯೋಜನೆಗಳ ಅನುಭವ ಮತ್ತು ಅರ್ಹ ವೃತ್ತಿಪರರಿಗೆ ಬಹುಮಾನದ ಪ್ಯಾಕೇಜ್‍ಗಳನ್ನು ನೀಡುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಹರಿಹರ ಮತ್ತು ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಕಾಶ್, ಬಾಪೂಜಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ನಿರ್ದೇಶಕರಾದ ಪ್ರೊ. ವೈ. ವೃಷಭೇಂದ್ರ, ಸಿಂಗಪೂರ್ ಇನ್ಫೋಸೈಟ್ ಕನ್ಸಲ್ಟಿಂಗ್ ಸಿ.ಇ.ಒ ಆಂಥೋನಿ, ಜರ್ಮನಿ ಇನ್ಫೋಸೈಟ್ ಕನ್ಸಲ್ಟಿಂಗ್ ಸಿ.ಇ.ಒ ವಿಶಾಲ್, ಬಿ.ಐ.ಇ.ಟಿ  ಪ್ರೋ. ಶೃತಿ ಮಾಕನೂರ ಇತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ : ಮುಖ್ಯಮಂತ್ರಿ ಸಿದ್ದರಾಮಯ್ಯ

    ಬೆಂಗಳೂರು, ಅಕ್ಟೋಬರ್ 24: ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದ್ದು, ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಟವೆಲ್ ಸರಿಯಾಗಿ ವಾಶ್ ಮಾಡದೆ ಇದ್ರೆ ಅದ್ರಿಂದಾನೇ ಬರುತ್ತೆ ಹಲವು ಕಾಯಿಲೆ..!

ಪ್ರತಿನಿತ್ಯ ಸ್ನಾನ ಮಾಡಿದಾಗ ಮೈ ಹೊರೆಸಲು ಟವೆಲ್ ಬಳಸುತ್ತೇವೆ. ಒಂದೇ ಟವೆಲ್ ಅನ್ನು ವಾರಗಟ್ಟಲೇ ಬಳಕೆ ಮಾಡುತ್ತೇವೆ. ಕೆಲವೊಂದು ಮನೆಯಲ್ಲಿ ಒಂದೇ ಟವೆಲ್ ಅನ್ನೇ ಎಲ್ಲರೂ ಬಳಸುತ್ತಾರೆ. ಆದರೆ ಇದರಿಂದಾನೇ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟಂತೆ

ಈ ರಾಶಿಯವರು ಹೊಸ ವ್ಯಾಪಾರ ವಹಿವಾಟುದೊಂದಿಗೆ ದೀರ್ಘಕಾಲದ ಸಂತೋಷ

ಈ ರಾಶಿಯವರು ಹೊಸ ವ್ಯಾಪಾರ ವಹಿವಾಟುದೊಂದಿಗೆ ದೀರ್ಘಕಾಲದ ಸಂತೋಷ, ಈ ರಾಶಿಯವರು ಇಷ್ಟಪಟ್ಟವರ ಎಲ್ಲಿ ದೂರ ಸರಿತ್ತಾರೋ ಎಂಬ ಚಿಂತೆ. ಗುರುವಾರ ರಾಶಿ ಭವಿಷ್ಯ -ಅಕ್ಟೋಬರ್-24,2024 ಅಹೋಹಿ ಅಷ್ಟಮಿ ಸೂರ್ಯೋದಯ: 06:15, ಸೂರ್ಯಾಸ್ತ :

error: Content is protected !!