ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದೇ ಇರೋದು ಕೂಡ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ.. ಎಷ್ಟೋ ಜನ ಮಕ್ಕಳಾಗದೆ ಬಾಡಿಗೆ ತಾಯ್ತನದ ಮೊರೆ ಹೋಗುತ್ತಿದ್ದಾರೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಹಣ ಮಾಡೋದಕ್ಕೆ ಹೋಗಿ ತಗಲಾಕಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಎಇಸಿಪಿ ಹರೀಶ್ ಪಾಂಡೆ ಯಶಸ್ವಿಯಾಗಿದ್ದಾರೆ.
ಮಹಿಳೆಯೊಬ್ಬಳು ತಾನೇ ಮಗುವನ್ನ ಎತ್ತು ಬಾಡಿಗೆ ತಾಯ್ತನ ಎಂದು ಹೇಳಿ ಮಾರಾಟ ಮಾಡುತ್ತಿದ್ದಳು. ಹಣಕ್ಕಾಗಿ ತಾನೆತ್ತ ಮಕ್ಕಳನ್ನೇ ಮಾರಾಟ ಮಾಡ್ತಾ ಇದ್ದದ್ದು ಬೆಳಕಿಗೆ ಬಂದಿದೆ. ಈಗಾಗಲೇ ನಾಲ್ಕು ಮಕ್ಕಳನ್ನು ಆ ರೀತಿ ಮಾರಾಟ ಮಾಡಿದ್ದಾಳೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಿಸಿಪಿ ಟೀಂ ದಾಳಿ ಮಾಡಿದ್ದು, ಮಗು ಮಾರಾಟ ವೇಳೆ ರೆಡ್ ಹ್ಯಾಂಡಾಗಿ ಸೆರೆಹಿಡಿದಿದ್ದಾರೆ. ನಾಲ್ವರು ಮಹಿಳಾ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಮಕ್ಕಳನ್ನು ಪಡೆದ ಪೋಷಕರು ಕಂಗಾಲಾಗಿದ್ದಾರೆ. ತಮ್ಮ ಮಕ್ಕಳೆಂದು ಪಡೆದ ಮಕ್ಕಳು ಅವರದ್ದೆ ಅಲ್ಲ ಅನ್ನೋದು ಗೊತ್ತಾಗಿ ದಿಗ್ಬ್ರಾಂತರಾಗಿದ್ದಾರೆ. ಸಾಕುವುದಾ ಅಥವಾ ಮೂಲ ಪೋಷಕರಿಗೆ ಕೊಡುವುದಾ ಅನ್ನೋ ಚಿಂತೆ ಶುರುವಾಗಿದೆ.