ಹಾಸನ: ಇತ್ತಿಚೆಗೆ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪನ ಪುತ್ರ ಮಾಡಾಳು ಪ್ರಶಾಂತ್ ಲೋಕಾಯುಕ್ತರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇನ್ನು ಸಂಬಂಧಪಟ್ಟ ದಾಖಲೆಗಳನ್ನು ಪರಿಸೀಲನೆ ನಡೆಸುತ್ತಿದ್ದು, ಒಂದೊಂದೆ ಅವ್ಯವಹಾರಗಳು ಹೊರಗೆ ಬರುತ್ತಿದೆ. ಇದರ ನಡುವೆ ನಾವೇ ಲೋಕಾಯುಕ್ತ ಮರುಸ್ಥಾಪನೆ ಮಾಡಿದ್ದು ಅಂತ ಬಿಜೆಪಿ ನಾಯಕರು ಹೇಳಿದ್ರು. ಇದೀಗ ಆ ವಿಚಾರಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಅರಸೀಕೆರೆಯ ಕೋಡಿ ಮಠಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಮಾಧ್ಯಮದರೊಂದಿಗೆ ಮಾತನಾಡಿದ್ದು, ಲೋಕಾಯುಕ್ತವನ್ನು ಮರುಸ್ಥಾಪನೆ ಮಾಡಿದ್ದು ಬಿಜೆಪಿ ಅಲ್ಲ. ಕೋರ್ಟ್. ಅವರು ಮರುಸ್ಥಾಪನೆ ಮಾಡಬೇಕೆಂದಿದ್ದರೆ ಮೂರುವರೆ ವರ್ಷದಿಂದ ಆಡಳಿತ ನಡೆಸುತ್ತಿದ್ದರಲ್ಲ. ಆಗಲೇ ಮಾಡಬೇಕಿತ್ತು. ಆದ್ರೆ ಕೋರ್ಟ್ ನಲ್ಲಿ ಈ ಸಂಬಂಧ ಯಾರೋ ಅರ್ಜಿ ಹಾಕಿದ್ದರು. ಪಿಐಎಲ್ ಹಾಕಿದ್ದ ಕಾರಣ ಲೋಕಾಯುಕ್ತವನ್ನು ತಂದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿರಲಿಲ್ಲ. ಲೋಕಾಯುಕ್ರ ನ್ಯಾಯಮೂರ್ತಿಯಾಗಿ ವಿಶ್ವನಾಥ್ ಶೆಟ್ಟಿ ಇದ್ದರು. ನಾವೂ ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವು ಮಾಡಿದ್ದೇವಾ..? ಇವ್ರು ಹೊಸದಾಗಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಿದ್ದಾರಾ..? ಎಸಿಬಿಯನ್ನು ಇವರು ರದ್ದು ಮಾಡಿಲ್ಲ. ಕೋರ್ಟ್ ಮಾಡಿರುವುದು ಎಂದು ಸ್ಪಷ್ಟ ಪಡಿಸಿದ್ದಾರೆ.