ಬೆಂಗಳೂರು: ಕಳೆದ ಒಂದೂವರೆ ವರ್ಷದಿಂದ ಜನ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. 2019ರಿಂದ ಕೊರೊನಾ ಎಂಬ ರೋಗ ಭಯಭೀತಗೊಳಿಸಿ ಬಿಟ್ಟಿತ್ತು. ಅದೆಷ್ಟು ಸಾವು ಅದೆಷ್ಟು ನೋವು. ಸದ್ಯ ನೆಮ್ಮದಿ ಕಂಡುಕೊಳ್ಳುತ್ತಿರುವಾಗಲೇ ಮತ್ತೆ ಕೊರೊನಾದ ಹೆಸರು ಕೇಳ್ತಾ ಇದೆ.
ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಾ ಇದೆ ಅಂತ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಜನರಿಗೂ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಕೊರೊನಾ ಮುನ್ಸೂಚನೆಯನ್ನು ಮತ್ತೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.
ನಿನ್ನೆ ಒಂದೇ ದಿನ ಕೊರೊನಾ ಸೋಂಕು ಹೆಚ್ಚಳವಾಗಿದೆ. ನೂರು ದಿನಗಳ ಬಳಿಕ ಕೋರೋನಾ ಸೋಂಕು ಹೆಚ್ಚಳವಾಗಿದೆ. ನಿನ್ನೆ ರಾಜ್ಯದಲ್ಲಿ 95 ಕೇಸ್, ಬೆಂಗಳೂರಿನಲ್ಲಿ 79 ಜನರಿಗೆ ಸೋಂಕು ತಗುಲಿದೆ. ಈ ಬಗ್ಗೆ ಸಚಿವ ಸುಧಾಕರ್ ಮಾತನಾಡಿದ್ದು, ಆರೋಗ್ಯದಲ್ಲಿ ಕಾಳಜಿ ವಹಿಸಲು ಸೂಚನೆ ನೀಡಿದ್ದಾರೆ.
ಇಲ್ಲಿಯ ತನಕ ಏನು ಇಲ್ಲ. ದೀರ್ಘ ಕಾಲದ ತನಕ ಕೆಮ್ಮು, ಜ್ವರ ಇರುತ್ತೆ. ಏನು ಕ್ರಮ ತೆಗೆದುಕೊಳ್ಳಬೇಕೆಂದು ನಾಳೆತೀರ್ಮಾನ ಮಾಡುತ್ತೇವೆ. ಕೊರೊನಾ ಹೆಚ್ಚಳವಾಗುತ್ತಿರುವ ಕಾರಣ ಜನ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ.