ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಬೆಳಸಿಕೊಳ್ಳಬೇಕು : ಚಳ್ಳಕೆರೆ ಯರ್ರಿಸ್ವಾಮಿ

suddionenews
1 Min Read

 

ಚಿತ್ರದುರ್ಗ, (ಮಾ.03) : ವಿಜ್ಞಾನ ನಮ್ಮ ಪ್ರತಿನಿತ್ಯದ ಜೀವನದಲ್ಲಿ ಬಳಕೆಯಾಗುವಂತಹದು. ಯಾರಿಗೆ ಪ್ರಶ್ನಿಸುವ ವೈಜ್ಞಾನಿಕ ಗುಣವಿರುತ್ತದೋ ಅವರು ವಿಜ್ಞಾನಿಗಳಾಗಬಹುದು ಎಂದು ತಾರಾಮಂಡಲದ ಸಂಸ್ಥಾಪಕರಾದ ಚಳ್ಳಕೆರೆ ಯರ್ರಿಸ್ವಾಮಿ ಹೇಳಿದರು.

ನಗರದ ಬಾಪೂಜಿ ಪಬ್ಲಿಕ್ ಸ್ಕೂಲ್ ನಲ್ಲಿ Sparkling Sciende Day ಮತ್ತು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸರ್. ಸಿ. ವಿ. ರಾಮನ್ ರವರು ನಮ್ಮ ದೇಶಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟರು. ಅವರ ನಂತರ ಈ ವರೆಗೂ ವಿಜ್ಞಾನದಲ್ಲಿ ಪ್ರಶಸ್ತಿಯನ್ನು ಯಾರೂ ಪಡೆದಿಲ್ಲ. ಆ ಪ್ರಯತ್ನವನ್ನು ವಿದ್ಯಾರ್ಥಿಗಳಾದ ನೀವು ಸಾಕಾರಗೊಳಿಸಿ ಎನ್ನುವ ಆತ್ಮವಿಶ್ವಾಸವನ್ನು ತುಂಬಿದರು. ನಂತರ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳನ್ನು ವೀಕ್ಷಿಸುತ್ತಾ ಅವರಿಂದ ವಿವರಣೆಯನ್ನು ಪಡೆಯುತ್ತಾ ವಿದ್ಯಾರ್ಥಿಗಳ ಜ್ಞಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ನಿರ್ದೇಶಕ ಚೇತನ್ ರವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಿ, ವಿಜ್ಞಾನದ ಸಹಾಯದಿಂದ ಹಲವಾರು ಸಂಶೋಧನೆಗಳನ್ನು ಮಾಡಬಹುದು ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಕೆ. ಎಂ. ವೀರೇಶ್ ಮಾತನಾಡಿ, ಸಿ. ವಿ. ರಾಮನ್ ರವರು ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸುತ್ತಾ ಎಲ್ಲಾ ಮಕ್ಕಳಲ್ಲಿ ಆ ರೀತಿಯ ಸಾಮರ್ಥ್ಯವಿರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಹಾಗೂ ಪ್ರೋತ್ಸಾಹ ಸಿಗಬೇಕೆಂದು ಹೇಳಿದರು.

ವಿದ್ಯಾರ್ಥಿಗಳನ್ನು ಮಾಡಿದ ಮಾದರಿಗಳನ್ನು ವೀಕ್ಷಿಸಲು ಪೋಷಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳು ಮಾಡಿದ ಮಾದರಿಗಳು ಹಾಗೂ ವಿವರಣೆಯನ್ನು ಕೇಳಿ ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಸಂಯೋಜಕರಾದ ಪ್ರೊ. ಶಿವಕುಮಾರ್ ಮುಖ್ಯಶಿಕ್ಷಕಿಯರು ಹಾಗೂ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *