ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ ಮಾತಿನ ಸಮರ ನಡೆಯುತ್ತಲೆ ಇರುತ್ತದೆ. ರಾಜಕೀಯ ವಿಚಾರ, ಬೆಳಗಾವಿ ವಿಚಾರ ಹೀಗೆ ಎಲ್ಲದರಲ್ಲೂ ಕಿತ್ತಾಡುತ್ತಾ ಇರುತ್ತಾರೆ. ಇದೀಗ ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆಯ ಪಾಲಿಟಿಕ್ಸ್ ಜೋರಾಗಿದೆ. ಪ್ರತಿಮೆ ಅನಾವರಣ ವಿಚಾರದಲ್ಲಿ ಇಬ್ಬರ ನಡುವೆ ಪ್ರತಿಷ್ಠೆಯ ದಂಗೆ ಎದ್ದಿದೆ.
ನಾಲ್ಕೂವರೆ ಕೋಟಿ ವೆಚ್ಚದಲ್ಲಿ ರಾಜಹಂಸಗಡ ಅಭಿವೃದ್ಧಿ ಮಾಡಲಾಗಿದೆ. ಅಲ್ಲಿ ಪ್ರತಿಷ್ಠಾಪನೆ ಮಾಡಿರುವ ಶಿವಾಜಿ ಪ್ರತಿಮೆ ಅನಾವರಣದ ವಿಚಾರಕ್ಕೆ ಸಾಕಷ್ಟು ಕಾಂಪಿಟೇಷನ್ ನಡೆಯುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಮೆ ಅನಾವರಣಕ್ಕೆ ಮಾರ್ಚ್ 5ರಂದು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಆದರೆ ಬೆಳಗಾವಿಯ ಸಾಹುಕಾರ್ ಪ್ರತಿಮೆಯನ್ನು ಇಂದೇ ಅನಾವರಣ ಮಾಡುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಸಿಎಂ ಬೊಮ್ಮಾಯಿ ಅವರ ಕಡೆಯಿಂದ ಪ್ರತಿಮೆ ಉದ್ಘಾಟನೆ ಮಾಡಿಸಲಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಗ್ರಾಮದ ಜನರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಪ್ರತಿಮೆ ಅನಾವರಣದ ವಿಚಾರದಲ್ಲಿ ನಮಗೆ ಬೆಂಬಲ ನೀಡಬೇಕು ಎಂದು ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಚುನಾವಣೆ ಹೊತ್ತಲ್ಲಿ ಬೆಳಗಾವಿ ರಣರಂಗವಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ.