ದೇವೇಗೌಡರ ಜೀವ ಮಣ್ಣಿಗೆ ಹೋಗುವುದರೊಳಗೆ ಪಕ್ಷ ಅಧಿಕಾರ ತರಬೇಕು : ಕುಮಾರಸ್ವಾಮಿ

suddionenews
1 Min Read

 

 

ರಾಮನಗರ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿಕ್ಕಾಪಟ್ಟೆ ಆಕ್ಟಿವ್ ಆಗಿವೆ. ಪ್ರಚಾರ ಕಾರ್ಯ ಶುರು ಮಾಡಿದೆ. ಜೆಡಿಎಸ್ ಕೂಡ ಈ ಬಾರಿ ಸ್ವಾತಂತ್ರ್ಯವಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದುಕೊಂಡು ಪ್ರಚಾರ ಕಾರ್ಯ ಆರಂಭಿಸಿದೆ. ಪಂಚರತ್ನ ರಥಯಾತ್ರೆ ಮೂಲಕ ಜನರ ಬಳಿ ಹೋಗುತ್ತಿದ್ದಾರೆ. ಇಂದು ಚನ್ನಪಟ್ಟಣದಲ್ಲಿ ಭಾವುಕರಾಗಿ ಮಾತನಾಡಿದ್ದಾರೆ ಕುಮಾರಸ್ವಾಮಿ.

ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿರಯವ ಕುಮಾರಸ್ವಾಮಿ, 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ನಿಲ್ಲುವುದಿಲ್ಲ. ಚನ್ನಪಟ್ಟಣದಿಂದ ಕಾರ್ಯಕರ್ತರನ್ನು ನಿಲ್ಲಿಸಿ, ಗೆಲ್ಲಿಸಿಕೊಂಡು ಬರುತ್ತೇನೆ. ನಾನು ಬೇರೆ ಕ್ಷೇತ್ರದಲ್ಲಿ ನಿಲ್ಲಬೇಕಾಗಿ ಬರಬಹುದು ಎಂದಿದ್ದಾರೆ.‌

ನಾನು ನನ್ನ ಕುಟುಂಬದ ಜನರನ್ನೇ ನಂಬಿ ಬಂದಿದ್ದೇನೆ. ನಮ್ಮ ತಂದೆಯ ಕಾಲದಿಂದಾನೂ ಅಷ್ಟೇ. ನಿಮ್ಮ ಎಲ್ಲರ ಆಸೆ ಏನು ಎಂಬುದು ಗೊತ್ತು. ದೇವೇಗೌಡರನ್ನು ಕರೆಸಿ ಸನ್ಮಾನ ಮಾಡಬೇಕು ಎಂದುಕೊಂಡಿದ್ದೀರಿ. ಆದ್ರೆ ಅವರು ಇಲ್ಲಿಗೆ ಬರುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅವರ ಜೀವನದ ಆಸೆ ಮಣ್ಣಿಗೆ ಹೋಗುವುದರೊಳಗೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks