Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ನೀತಿ ಸಂಹಿತೆ ಪಾಲನೆ ಅಗತ್ಯ : ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಫೆ.23) : ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಮಾಧ್ಯಮದವರು ಮಾದರಿ ನೀತಿ ಸಂಹಿತೆಯ ಬಗ್ಗೆ ಸಮಗ್ರ ಮಾಹಿತಿ ಹೊಂದಿರುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಸಂಬಂಧ ಮಾದರಿ ನೀತಿ ಸಂಹಿತೆ ಹಾಗೂ ಖರ್ಚು ವೆಚ್ಚದ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಚುನಾವಣಾ ಆಯೋಗದ ನಿರ್ದೇಶನ ಹಾಗೂ ಕಾಲಕಾಲಕ್ಕೆ ನೀಡುವ ಸೂಚನೆ, ಮಾರ್ಗಸೂಚಿ ಅನ್ವಯ ಕ್ರಮ ವಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸಲು ವಿವಿಧ ಅಧಿಕಾರಿ, ಸಿಬ್ಬಂದಿಗಳಿಗೆ ಹಂತ ಹಂತವಾಗಿ ತರಬೇತಿ ನೀಡಲಾಗುತ್ತಿದ್ದು, ಇದರ ಜೊತೆಗೆ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೂ ಮಾದರಿ ನೀತಿ ಸಂಹಿತೆ ಹಾಗೂ  ಚುನಾವಣಾ ಖರ್ಚು ವೆಚ್ಚದ ನಿರ್ವಹಣೆ ಬಗ್ಗೆ ತರಬೇತಿ ನೀಡಿ, ಸಂದೇಹ ಪರಿಹರಿಸಿಕೊಳ್ಳಲು ಮೊದಲ ಹಂತದಲ್ಲಿ ತರಬೇತಿ ನೀಡಲಾಗುತ್ತಿದೆ.

ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಯಾಗಲಿದ್ದು, ಈ ಸಂದರ್ಭದಲ್ಲಿ ತಪ್ಪದೆ ಎಲ್ಲ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಪಾಲಿಸಬೇಕಾಗುತ್ತದೆ.

ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ಖರ್ಚು ವೆಚ್ಚಗಳ ನಿರ್ವಹಣೆ ಬಗ್ಗೆ ಭಾರತ ಚುನಾವಣಾ ಆಯೋಗ ಈಗಾಗಲೆ ಮಾರ್ಗಸೂಚಿಯನ್ನು ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.  ಇದನ್ನು ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳಾಗಲು ಇಚ್ಛಿಸುವವರು  ಪಡೆದು, ಸಮಗ್ರವಾಗಿ ಅರಿತುಕೊಳ್ಳಬೇಕು.

ನಂತರದಲ್ಲಿ ಮಾಹಿತಿಯ ಕೊರತೆಯಿಂದ ತಪ್ಪಾಗಿದೆ ಎಂದು ಯಾರೂ ಕೂಡ ಸಬೂಬು ಹೇಳಿ, ಜಾರಿಕೊಳ್ಳಲು ಅವಕಾಶವಿಲ್ಲ.  ಚುನಾವಣಾ ಪ್ರಕ್ರಿಯೆಯ ವೀಕ್ಷಣೆಗೆಂದೇ ಭಾರತ ಚುನಾವಣಾ ಆಯೋಗ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಜನರಲ್ ವೀಕ್ಷಕರು, ಕಾನೂನು ಸುವ್ಯವಸ್ಥೆ ಹಾಗೂ ಪಾಲನೆ ವೀಕ್ಷಕರು, ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಚುನಾವಣಾ ಆಯೋಗದ ನಿರ್ದೇಶನಂತೆ ರಾಜಕೀಯ ಪಕ್ಷಗಳು ಹಾಗೂ ಮಾಧ್ಯಮದವರು ಯಾವ ರೀತಿಯಾಗಿ ಮಾದರಿ ನೀತಿ ಸಂಹಿತೆ ಪಾಲನೆ ಮಾಡಬೇಕು ಎಂಬ ಉದ್ದೇಶದಿಂದ ತರಬೇತಿ ಕಾರ್ಯಾಗಾರ ಆಯೋಜಿಸಿ, ತರಬೇತಿ ನೀಡಲಾಗುತ್ತಿದೆ.  ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನೀತಿ ಸಂಹಿತೆ ಉಲ್ಲಂಘಿಸಿ, ತೊಂದರೆಗೆ ಒಳಗಾಗಬಾರದು ಎಂಬುದೇ ತರಬೇತಿಯ ಉದ್ದೇಶವಾಗಿದೆ.  ಮಾಧ್ಯಮಗಳು ಕೂಡ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆಯ ಉಲ್ಲಂಘನೆ ಬಗ್ಗೆ ವರದಿ ಪ್ರಕಟಿಸಿ, ಅಧಿಕಾರಿಗಳ ಗಮನಕ್ಕೆ ತರುವಂತಹ ಕೆಲಸ ಮಾಡಬೇಕು.  ಮಾಧ್ಯಮಗಳು ಕೂಡ ಸ್ವಯಂ ನಿರ್ಬಂಧ ಹಾಕಿಕೊಂಡು, ಪೇಯ್ಡ್ ನ್ಯೂಸ್ ಪ್ರಕಟಿಸುವಂತಹ ಕಾರ್ಯಕ್ಕೆ ಮುಂದಾಗಬಾರದು.  ನೀತಿ ಸಂಹಿತೆ ಉಲ್ಲಂಘಿಸುವವರು ಪ್ರಜಾಪ್ರಾತಿನಿಧ್ಯ ಕಾಯ್ದೆ ಅನ್ವಯ ಜೈಲು ಶಿಕ್ಷೆ ಹಾಗೂ ದಂಡನೆಗೆ ಒಳಗಾಗಬೇಕಾಗುತ್ತದೆ ಎಂದರು.

ಚುನಾವಣಾ ಸಂದರ್ಭದಲ್ಲಿ ಪಕ್ಷ ಹಾಗೂ ಅಭ್ಯರ್ಥಿಗಳ ಖರ್ಚು ವೆಚ್ಚದ ಬಗ್ಗೆ ಪ್ರತ್ಯೇಕ ತಂಡಗಳು ತನ್ನದೇ ಆದ ಶ್ಯಾಡೋ ರಿಜಿಸ್ಟರ್ ನಿರ್ವಹಣೆ ಮಾಡುತ್ತವೆ. ಪ್ರತಿಯೊಂದು ಸಭೆ-ಸಮಾರಂಭದ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ ವೆಚ್ಚವನ್ನು ನಮೂದಿಸಲಾಗುವುದು. ಹೀಗಾಗಿ ರಾಜಕೀಯ ಪಕ್ಷ, ಅಭ್ಯರ್ಥಿಗಳು ಖರ್ಚು ವೆಚ್ಚಗಳ ನಿಖರ ಮಾಹಿತಿಯನ್ನು ನೀಡಲೇಬೇಕು.  ಆದ್ದರಿಂದ ಚುನಾವಣಾ ಖರ್ಚು ವೆಚ್ಚದ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಮರ್ಪಕವಾಗಿ ಮಾಹಿತಿ ಪಡೆಯಬೇಕು.  ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಗರಿಷ್ಠ 40 ಲಕ್ಷ ರೂ. ಗಳ ವೆಚ್ಚ ಮಿತಿ ನಿಗದಿಪಡಿಸಲಾಗಿದೆ.  ವೆಚ್ಚ ಮಿತಿ ಮೀರಿದಲ್ಲಿ, ಅಭ್ಯರ್ಥಿತನ ಕಳೆದುಕೊಳ್ಳುತ್ತಾರೆ.  ಹಾಗಾಗಿ ಚುನಾವಣಾ ಖರ್ಚು-ವೆಚ್ಚಕ್ಕೆ ಸಂಬಂಧಿಸಿದಂತೆ ಹೆಚ್ಚು ನಿಗಾವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಜಿಲ್ಲಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿ ಡಿ.ಆರ್.ಮಧು ಮಾತನಾಡಿ, ಪೇಯ್ಡ್ ನ್ಯೂಸ್‍ಗೆ ಸಂಬಂಧಪಟ್ಟಂತೆ ಎಂ.ಸಿ.ಎಂ.ಸಿ ತಂಡ ಕಾರ್ಯನಿರ್ವಹಿಸಲಿದ್ದು, ಈ ಸಮಿತಿಯವರು ದಿನನಿತ್ಯವೂ ಪತ್ರಿಕೆ, ಟಿ.ವಿ. ಗಳಲ್ಲಿ ಪ್ರಸಾರವಾಗುತ್ತಿರುವುದರ ಬಗ್ಗೆ ನಿಗಾವಹಿಸುತ್ತಾರೆ. ಪೇಯ್ಡ್ ನ್ಯೂಸ್ ಬಗ್ಗೆ ಸಂಶಯಗಳು ಬಂದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತರಬೇತುದಾರ ನಾಗಭೂಷಣ್ ಅವರು ಮಾದರಿ ನೀತಿ ಸಂಹಿತೆ ಕುರಿತು ಮಾತನಾಡಿ, ಎಲ್ಲರಿಗೂ ಸಮಾನ ಅವಕಾಶ ಕೊಡುವುದು, ನಿಷ್ಪಕ್ಷ, ಮುಕ್ತ ಹಾಗೂ ನ್ಯಾಯಸಮ್ಮತವಾದ ಚುನಾವಣೆ ನಡೆಸುವ ಉದ್ದೇಶದಿಂದ ಮಾದರಿ ನೀತಿ ಸಂಹಿತೆ ರೂಪಿಸಲಾಗಿದೆ ಎಂದರು.

ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವಹಿಸಲಿದ್ದು, ಒಂದು ಪಕ್ಷ ಇನ್ನೊಂದು ಪಕ್ಷದ ನೀತಿ ನಿಯಮಗಳನ್ನು ವಿಮರ್ಶೆ ಮಾಡಲು ಅವಕಾಶ ನೀಡಲಾಗಿದೆ. ಆದರೆ ಯಾವುದೇ ರಾಜಕೀಯ ಪಕ್ಷಗಳು ಜಾತಿ, ಧರ್ಮವನ್ನು ಆದ್ಯತಾವಲಯವಾಗಿ ಪರಿಗಣಿಸಬಾರದು ಎಂಬ ಮಾರ್ಗಸೂಚಿ ನೀಡಲಾಗಿದೆ. ಆಧಾರರಹಿತವಾದ, ವ್ಯಕ್ತಿಗತವಾದ ನಿಂದನೆ ಮಾಡಲು ಅವಕಾಶ ಇಲ್ಲ. ಮತದಾರರಿಗೆ ಆಮಿಷ ಒಡ್ಡುವಂತಿಲ್ಲ ಎಂದು ಹೇಳಿದರು.

ಮುಖ್ಯವಾಗಿ ಸಭೆಗಳ ಆಯೋಜನೆ ಸಂದರ್ಭದಲ್ಲಿ ನಿರ್ಧಿಷ್ಟ ಪಡಿಸಿ ನಿಯಮಗಳನ್ನು ಎಲ್ಲ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಂಬಂಧಪಟ್ಟವರಿಂದ ಅನುಮತಿ ಪಡೆದು ಸಭೆ ಆಯೋಜಿಸಬೇಕು. ಮೆರವಣಿಗೆಗೆ ಸಂಬಂಧಪಟ್ಟಂತೆ ಮೆರವಣಿಗೆ ಮಾಡುವ ಮುನ್ನ ಸಂಪೂರ್ಣವಾದ ವಿವರವನ್ನು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದು ಮೆರವಣಿಗೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಎನ್.ರಾಜು, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು  ಮತ್ತಿತರರು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನಾಗುತ್ತೆ ?

ಸುದ್ದಿಒನ್ : ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಕುಡಿಯುವುದರಿಂದ ದೇಹವು ದಿನವಿಡೀ ತೇವಾಂಶದಿಂದ ಕೂಡಿರುತ್ತದೆ. ಇದರ೬ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಅಂಶಗಳಲ್ಲಿ ಸಮೃದ್ಧವಾಗಿದೆ. ಇದನ್ನು ಪ್ರತಿದಿನ

ಈ ರಾಶಿಗಳಿಗೆ ಕಂಕಣಬಲದ ಅಡಚಣೆ ನಿವಾರಣೆ

ಈ ರಾಶಿಗಳಿಗೆ ಕಂಕಣಬಲದ ಅಡಚಣೆ ನಿವಾರಣೆ , ಈ ರಾಶಿಗಳಿಗೆ ಉದ್ಯೋಗದಲ್ಲಿ ತೊಂದರೆ, ಗುರುವಾರ- ರಾಶಿ ಭವಿಷ್ಯ ಡಿಸೆಂಬರ್-19,2024 ಸೂರ್ಯೋದಯ: 06:44, ಸೂರ್ಯಾಸ್ತ : 05:42 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ,

ಕೋಲಾರದಲ್ಲಿ ಭೀಕರ ಅಪಘಾತ : ನಾಲ್ವರು ಸಾವು..!

ಕೋಲಾರ: ಕೂಲಿ ಮಾಡಿ ಅಂದಿನ ಜೀವನ ಅಂದು ನಡೆಸಿದರೆ ಸಾಕಾಗಿರುತ್ತೆ. ಸಾವಿರ ಕನಸಿಲ್ಲದಿದ್ದರು ನಾಳೆಯ ಕನಸೊತ್ತು ಕೂಲಿಗೆ ಹೋಗುತ್ತಿದ್ದವರು ಅವರು. ಆದರೆ ಯಮರಾಯ ಇಂದು ಅವರನ್ನು ತಮ್ಮ ವಿಳಾಸಕ್ಕೆ ಕರೆದುಕೊಂಡು ಹೋಗಿದೆ. ಕೂಲಿ ಮುಗಿಸಿ

error: Content is protected !!