ಇದು ನನ್ನ ಕಡೆಯ ಅಧಿವೇಶನ : ವಿದಾಯದ ಭಾಷಣ ಮಾಡಿದ ಯಡಿಯೂರಪ್ಪ..!

suddionenews
1 Min Read

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದೆ. ಆದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಳೆದ ಬಾರಿಯ ಚುನಾವಣೆಯನ್ನೇ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. 2023ರ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ ಈ ಬಾರಿಯ ವಿಧಾನಸಭಾ ಅಧಿವೇಶನವೇ ಅವರು ಭಾಗಿಯಾಗುವ ಕಡೆಯ ಕಲಾಪವಾಗಿರುತ್ತದೆ. ಇಂದು ಕಲಾಪದ ವೇಳೆ ಭಾಷಣ ಮಾಡುವಾಗ ವಿದಾಯದ ಮಾತುಗಳನ್ನು ಆಡಿದ್ದಾರೆ.

ಇನ್ನೂ ಐದು ವರ್ಷಗಳ ಕಾಲ ದೇವರು ಶಕ್ತಿ ನೀಡಿದರೆ ನಾನು ಕೆಲಸ ಮಾಡುತ್ತೇನೆ. ಮನೆಯಲ್ಲಿ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಪಕದಷಕ್ಕಾಗಿ ಹೋರಾಟ ನಡೆಸುತ್ತಲೇ ಇರುತ್ತೇನೆ. ಈ ಚುನಾವಣೆ ಹಾಗೂ ಮುಂದಿನ ಚುನಾವಣೆಯಲ್ಲಿ ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಎಲ್ಲಾ ಪ್ರಯತ್ನ ಮಾಡುತ್ತೇನೆ. ಈಗಾಗಲೇ ನಾನು ಚುನಾವಣೆಯಲ್ಲಿ ನಿಲ್ಲಲ್ಲ ಎಂದು ಹೇಳಿದ್ದೇನೆ.

ಬದುಕಿನ ಕೊನೆ ಇರುವವರೆಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯತ್ನಿಸುತ್ತೇನೆ. ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಈ ಕಲಾಪದ ನಡುವೆ ನಾನು ಯಾವುದೇ ರೀತಿಯ ಮಾತುಗಳನ್ನು ಆಡಿಲ್ಲ. ಇದು ನನ್ನ ಕಡೆಯ ಅಧಿವೇಶನ. ನಾನು ಮತ್ತೆ ಚುನಾವಣೆಯಲ್ಲಿ ನಿಲ್ಲಲ್ಲ ಎಂದು ಭಾವುಕರಾಗಿ ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *