ದಾವಣಗೆರೆ: ಈ ಹೆದ್ದಾರಿಗಳಲ್ಲಿ ವಾಹನಗಳು ಸರಾಗವಾಗಿ ಸಂಚರಿಸಬಹುದಾದ ಅನುಕೂಲವಿರುವ ಕಾರಣ ಕೆಲವು ಪುಂಡರು ಹೆದ್ದಾರಿಗಳಲ್ಲಿ ತಮ್ಮದೇ ಆಟಾಟೋಪಗಳನ್ನು ಮಾಡುತ್ತಿರುತ್ತಾರೆ. ಆದ್ರೆ ಇಂಥ ಆಟಾಟೋಪಗಳಿಗೆ ಬ್ರೇಕ್ ಹಾಕುವುದಕ್ಕೆ ದಾವಣಗೆರೆ ಹೆದ್ದಾರಿ ಪ್ರಾಧಿಕಾರ ಸಿದ್ಧವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಅವರು, ಹೆದ್ದಾರಿಯಲ್ಲಿ ಪಥ ಶಿಸ್ತು ಉಲ್ಲಂಘನೆ ಮಾಡಿದವರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು. ಈ ಹೊಸ ನಿಯಮ ಸೋಮವಾರ ಸಂಜೆಯಿಂದಾನೇ ಜಾರಿಗೆ ಬರಲಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ಹಾದು ಹೋಗಿದೆ. ದಾವಣಗೆರೆಯ ಹೆದ್ದಾರಿಯಲ್ಲಿ ಸಂಜೆಯಿಂದ ಪೈಲೆಟ್ ಪ್ರಾಜೆಕ್ಟ್ ಆರಂಭವಾಗಿದೆ.
ಈ ಯೋಜಬೆಯ ಉದ್ದೇಶವೇ ಹೆದ್ದಾರಿಯಲ್ಲಿ ಸಂಭವಿಸುವ ದುರಂತಕ್ಕೆ ಕಡಿವಾಣ ಹಾಕಬೇಕು. ಪಥ ಶಿಸ್ತು ಎಂಬ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಜಿಲ್ಲೆಯಲ್ಲಿ ಆರು ಪಥ ಮಾಡಲಾಗಿದೆ. ಅತಿ ವೇಗವಾಗಿ ಹೋಗುವ ವಾಹನಗಳಿಗೆ ಒಳ ಪಥವನ್ನು ನಿಗದಿ ಮಾಡಲಾಗಿದೆ. ಈ ಲೈನ್ ನಲ್ಲಿ ಬಾರೀ ವಾಹನಗಳು ಹೋಗುವಂತಿಲ್ಲ. ಬಾರೀ ವಾಹನಗಳಿಗೆ ಎರಡನೇ ಲೈನ್ ಇರುತ್ತದೆ. ಈ ನಿಯಮ ಉಲ್ಲಂಘಿಸಿದವರಿಗೆ 500 ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.