ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ : ಗ್ರಾಮೀಣ ಕಲೆಗಳು ಜಾನಪದದ ಜೀವನಾಡಿ ಎಂದು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪೀಲಾಪುರ ಆರ್.ಕಂಠೇಶ್ ಹೇಳಿದರು.
ಹಿರಿಯೂರು ತಾಲ್ಲೂಕಿನ ಅರಿಶಿನಗುಂಡಿಯಲ್ಲಿ ಕೋಡಿ ಕರಿಯಮ್ಮದೇವಿ ಸಂಗೀತ ವಿದ್ಯಾಲಯ ಕಸಪ್ಪನಹಳ್ಳಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ನಡೆದ ಗಡಿನಾಡ ಉತ್ಸವ-2023 ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿಂದಿನ ತಲೆಮಾರಿನ ಜನಪದರು ತಮ್ಮ ಬದುಕಿನ ಆಯಾಸ ಕಳೆಯಲು ಕುಟ್ಟುವಾಗ, ಬೀಸುವಾಗ, ಕಳೆ ಕೀಳುವಾಗ, ತೊಟ್ಟಿಲು ತೂಗುವಾಗ, ಮದುವೆ ಇನ್ನಿತರೆ ಶುಭ ಸಮಾರಂಭ, ಹಬ್ಬ ಹರಿದಿನ, ಜಾತ್ರೆ, ಪರುಸೆ, ಉತ್ಸವಗಳಲ್ಲಿ ಸೋಬಾನೆ ಹಾಡು, ಭಜನೆ, ಕೋಲಾಟ, ವೀರಗಾಸೆ, ಡೊಳ್ಳು ಕುಣಿತ, ಕರಡಿ ಮಜಲು, ಪೌರಾಣಿಕ ನಾಟಕ ಹೀಗೆ ಹತ್ತು ಹಲವಾರು ಕಲೆಗಳನ್ನು ಪ್ರದರ್ಶನಗೊಳಿಸುತ್ತ ಆರೋಗ್ಯದಿಂದ ಬದುಕುತ್ತಿದ್ದರು. ನಮ್ಮ ಜನಪದರಲ್ಲಿ ಕಲೆ ಮತ್ತು ಸಾಂಸ್ಕøತಿಕ ಸಂಪತ್ತು ಅಪಾರವಾಗಿದ್ದರು ವಿಜ್ಞಾನ ಮತ್ತು ತಂತ್ರಜ್ಞಾನ, ಆಧುನಿಕ ಯುಗಕ್ಕೆ ಸಿಲುಕಿ ಅಳಿವಿನ ಹಂಚಿಗೆ ತಲುಪಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಿಂದ ಹುಟ್ಟಿಕೊಂಡಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಿ ಯುವ ಜನಾಂಗಕ್ಕೆ ಪರಿಚಯಿಸಬೇಕು. ನಮ್ಮ ಜನಪದರ ಕಲೆಗಳ ಮೇಲೆ ಅನ್ಯ ಭಾಷೆಗಳು ದಾಳಿ ನಡೆಸದಂತೆ ಸಂರಕ್ಷಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು, ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ ಗಡಿನಾಡ ಉತ್ಸವದ ಅಧ್ಯಕ್ಷತೆ ವಹಿಸಿದ್ದರು. ಪಟೇಲ್ ಕೋಡಪ್ಪ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಾರಪ್ಪ, ಹಿರಿಯ ತಬಲ ಕಲಾವಿದ ಆಯಿತೋಳು ಚಂದ್ರಪ್ಪ, ಗ್ರಾಮದ ಮುಖಂಡರುಗಳಾದ ಕಾಳಪ್ಪ, ಸಿದ್ದಪ್ಪ, ತಳವಾರ್ ಚಿಕ್ಕಪ್ಪ, ಶಂಕರಪ್ಪ, ಪುರುಷಪ್ಪ, ಸಂಗೀತ ಕಲಾವಿದರುಗಳಾದ
ಓ.ಮೂರ್ತಿ, ಸರಸ್ವತಿ, ಮಧು, ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ, ವೆಂಕಟೇಶ್, ಶಶಿ ಇನ್ನು ಅನೇಕ ಕಲಾವಿದರು ಭಾಗವಹಿಸಿದ್ದರು.
ಜಾನಪದ ಸಂಗೀತ, ಸುಗಮ ಸಂಗೀತ, ಕನ್ನಡ ಗೀತೆಗಳ ಗಾಯನ, ಸೋಬಾನೆ ಪದ, ದೇವರ ನಾಮಗಳನ್ನು ಹಾಡಲಾಯಿತು, ಶಾಲಾ ಮಕ್ಕಳು ನೃತ್ಯ ಪ್ರದರ್ಶಿಸಿದರು.