ಮಾಹಿತಿ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ಫೆ.16): ಜಿಲ್ಲಾ ಅಂಧತ್ವ ನಿಯಂತ್ರಣಾ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನೇತ್ರ ಜ್ಯೋತಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಸರ್ವೋದಯ ಮಿತ್ರಮಂಡಳಿ ವತಿಯಿಂದ ಫೆ.23 ರಿಂದ 25ರ ವರೆಗೆ ಜಿಲ್ಲಾ ಆಸ್ಪತ್ರೆ ರೂ.51ರಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
ರೋಗಿಗಳಿಗೆ ಫೆ.23 ಗುರುವಾರದಂದು ಕಣ್ಣಿನ ತಪಾಸಣೆ ನಡೆಸಲಾಗುವುದು. ಫೆ.24 ಶುಕ್ರವಾರದಂದು ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಜರುಗಲಿದೆ. ಫೆ.25 ಶನಿವಾರದಂದು ರೋಗಿಗಳನ್ನು ಬಿಡುಗಡೆಗೊಳಿಸಲಾಗುವುದು.
ಶಿಬಿರಕ್ಕೆ ಆಗಮಿಸುವ ರೋಗಿಗಳು ಯಾವುದಾದರು ಒಂದು ಗುರುತಿನ ಚೀಟಿ ಹಾಗೂ ಅದರ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು. ರೋಗಿಗಳು ಮುಖ ಕ್ಷೌರ ಮಾಡಿಸಿಕೊಂಡು, ತಲೆ ಸ್ನಾನ ಮಾಡಿ ಶುಭ್ರವಾದ ಬಟ್ಟೆ ತೊಟ್ಟು ಶಿಬಿರಕ್ಕೆ ಆಗಮಿಸಬೇಕು. ರೋಗಿಗಳು ಜೊತೆಯಲ್ಲಿ ಒಬ್ಬ ಸಹಾಯಕರನ್ನು ಕರೆತರಬೇಕು. ವೈದ್ಯರು ನೀಡುವ ಸಲಹೆ ಸೂಚನೆಗಳನ್ನು ಪಾಲಿಸಬೇಕು.
ಹಿರಿಯ ನೇತ್ರ ತಜ್ಞ ಹಾಗೂ ಜಿಲ್ಲಾ ಅಂದತ್ವ ನಿಯಂತ್ರಣಾಧಿಕಾರಿ ಡಾ.ಆರ್.ಕೃಷ್ಣಮೂರ್ತಿ, ನೇತ್ರ ತಜ್ಞರಾದ ಡಾ.ಶಿಲ್ಪಾ.ಎಂ.ಐ, ಡಾ.ಸಂದೀಪ್.ಎಂ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವರು.
ಹೆಚ್ಚಿನ ಮಾಹಿತಿಗಾಗಿ ಸರ್ವೋದಯ ಮಿತ್ರ ಮಂಡಳಿಯ ಎಸ್.ಜಿ.ದಿಲೀಪ್ ಕುಮಾರ್ ಮೊಬೈಲ್ ಸಂಖ್ಯೆ 9901564164, ನೇತ್ರಾಧಿಕಾರಿ ಕೆ.ಸಿ.ರಾಮು ಮೊಬೈಲ್ ಸಂಖ್ಯೆ 9916371066 ಇವರನ್ನು ಸಂಪರ್ಕಿಸಬಹುದು. ಪ್ರತಿ ಮೂರು ತಿಂಗಳಿಗೆ ಒಮ್ಮೆ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗುವುದು. ಕ್ಯಾಂಪಿಗೆ ಬರುವ ರೋಗಿಗಳು ಯಾವುದಾದರೂ ಒಂದು ಗುರುತಿನ ಚೀಟಿ ಜೆರಾಕ್ಸ್ ಕಡ್ಡಾಯವಾಗಿ ತರಬೇಕು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.