ಬೆಂಗಳೂರು: ಮಂಡ್ಯದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಸಚಿವ ಅಶ್ವತ್ಥ್ ನಾರಾಯಣ್ ಟಿಪ್ಪು ಸುಲ್ತಾನ್ ವಿಚಾರ ಮಾತನಾಡಿದ್ದರು. ಈ ವೇಳೆ ಟಿಪ್ಪು ಹೊಡೆದಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದಾಕಬೇಕು ಎಂದಿದ್ದರು. ಈ ವಿಚಾರಕ್ಕೆ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದರು. ವಿಷಯ ದೊಡ್ಡದಾಗುವ ಮೊದಲೇ ಅಶ್ವತ್ಥ್ ನಾರಾಯಣ್ ಕ್ಷಮೆ ಕೇಳಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಜನರ ಬೆಂಬಲವನ್ನು ಪಡೆಯಬೇಕು, ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂಬುದು ಸ್ಪಷ್ಟ. ನಾವೀಗ ಪ್ರಜಾಪ್ರಭುತ್ವದಲ್ಲಿ ಇದ್ದೀವಿ. ಯುದ್ಧದ ಕಾಲದಲ್ಲಿ ಅಲ್ಲ ಎಂದಿದ್ದಾರೆ. ನನ್ನ ಮಾತಿನ ಹಿಂದೆ ಯಾವುದೇ ದುರುದ್ಧೇಶವಿಲ್ಲ. ಚುನಾವಣೆಯನ್ನು ಗೆಲ್ಲಬೇಕು ಎಂಬುದರ ಅರ್ಥದಲ್ಲಿ ಹೇಳಿದ್ದು. ಕಾಂಗ್ರೆಸ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಬೇಕು ಎಂಬ ಉದ್ದೇಶದಿಂದ ಹೇಳಿದ್ದು.
ವೈಯಕ್ತಿಕವಾಗಿ ನನಗೆ ಯಾವ ವ್ಯತ್ಯಾಸವಿಲ್ಲ. ಅವರಿಗೆ ನೋವಾಗಿದ್ದರೆ ಕ್ಷಮೆ ಇರಲಿ. ಇದನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಅವರು ಒಬ್ಬ ಮುಖ್ಯಮಂತ್ರಿಯನ್ನು ನಾಯಿಮರಿ ಅಂತೆಲ್ಲಾ ಕರೆದಿದ್ದಾರೆ. ನಮ್ಮ ಪ್ರಧಾನಿಯನ್ನು ನರಹಂತಕ ಅಂತ ಕರೆದಿದ್ದಾರೆ. ಹೊಡೆದಾಡಿ ಬಡಿದಾಡಿ ಗೆಲ್ಲುವುದಲ್ಲ. ಮತಗಳ ಮೂಲಕ ಗೆದ್ದಿದ್ದೇನೆ. ಆ ಕಾಲದಲ್ಲಿ ಯುದ್ಧದ ಮೂಲಕ ಗೆದ್ದರು ಈ ಕಾಲದಲ್ಲಿ ಚುನಾವಣೆ ಮೂಲಕ ನಾವೂ ಅವರನ್ನು ಸೋಲಿಸಬೇಕು ಎಂದು ಹೇಳಿದ್ದೇನೆ ಎಂದಿದ್ದಾರೆ.