ಬೆಂಗಳೂರು: ರಾಜ್ಯರಾಜಕಾರಣದಲ್ಲಿ ಈಗ ಟೆಂಡರ್ ಬೆಂಕಿ ಹೊತ್ತಿಕೊಂಡಿದೆ. ಇಂದು ಬೆಳಗ್ಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸರ್ಕಾರದ ಮೇಲೆ ಆರೋಪ ಮಾಡಿದ್ದರು. ತರಾತುರಿಯಲ್ಲಿ ಟೆಂಡರ್ ಕೊಡುವುದಕ್ಕೆ ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು.
ಈ ಬಗ್ಗೆ ಸಿಎಂ ಬೊಮ್ಮಾಯಿ ಅವರು ಮಾತನಾಡಿದ್ದು, ಇವತ್ತು ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಟೆಂಡರ್ ಸಮಿತಿ ಮಾಡಿದ್ದೀವಿ. ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತೆ. ನೀರಾವರಿ ಸಮಿತಿಯಲ್ಲಿ ಎರಡು ಸಮಿತಿ ಇತ್ತು. ಆದ್ರೆ ಎರಡನ್ನು ಮುಚ್ಚು ಹಾಕಿದ್ರು. ಯಾಕೆ ಬಂದು ಮಾಡಿದ್ರಿ. ಕಾಂಗ್ರೆಸ್ ಸರ್ಕಾರ ಇದ್ದಾಗ ಎರಡು ಸಮಿತಿ ಮುಚ್ಚಿ, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದ್ದರು.
ನ್ಯಟಷನಲ್ ಹೈವೇ ಎಷ್ಟು ಫಾಸ್ಟ್ ಆಗುತ್ತೆ, ಅಷ್ಟು ಫಾಸ್ಟ್ ಆಗಿ ಭ್ರಷ್ಟಾಚಾರ ಮಾಡೋಕೆ ಮುಚ್ಚಿದರು. ಇದು ಒಂದು ಭಾಗವಷ್ಟೇ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲರಾದರು.
ಟೆಂಡರ್ ಅವರಿಗೆ ಕಮಿಷನ್ ಕೊಡುವವರಿಗೆ ಕೊಡುತ್ತಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಿಎಂ ಬೊಮ್ಮಾಯಿ ಮಾತನಾಡಿ, ಅವರು ಮೊದಲು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿ. ಬೇಲ್ ಗಳನ್ನು ರಕ್ಷಣೆ ಮಾಡಿಕೊಳ್ಳಲಿ. ಕಾಂಗ್ರೆಸ್ ನವರು ಅವರು ಮಾಡಿರುವ ಅನುಭವದ ಆಧಾರದ ಮೇಲೆ ಮಾತನಾಡುತ್ತಿದ್ದಾರೆ. ಅವರು ಅಧಿಕಾರಕ್ಕೆ ಬಂದರೆ ಸುಲಿಗೆ ಮಾಡುವುದಕ್ಕೆ ಬರುತ್ತಿದ್ದಾರೆ ಎಂಬ ಅವರ ಅಜೆಂಡಾದ ಬಗ್ಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.