ನವದೆಹಲಿ: ಇತ್ತಿಚೆಗೆ ಪ್ರಧಾನಿ ಮೋದಿ ವಿರುದ್ಧ ಡಾಕ್ಯೂಮೆಂಟರಿ ಬಾರೀ ಸುದ್ದಿಯಲ್ಲಿದ್ದ ಬಿಬಿಸಿ ಕಚೇರಿ ಮೇಲೆ ಇಂದು ಐಟಿ ದಾಳಿ ನಡೆದಿದೆ. ಸುಮಾರು 60 ರಿಂದ 70 ಅಧಿಕಾರಿಗಳು ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿ ಮತ್ತು ಮುಂಬೈನಲ್ಲಿರುವ ಕಚೇರಿ ಮೇಲೆ ದಾಳಿಯಾಗಿದೆ.

ಇನ್ನು ಈ ದಾಳಿ ವೇಳೆ, ಆದಾಯ ತೆರಿಗೆ ಅಧಿಕಾರಿಗಳು ಅಲ್ಲಿನ ಕೆಲಸಗಾರರ ಎಲ್ಲಾ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆಯೇ ದಾಳಿ ನಡೆಸಿ, ಕಚೇರಿಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

2002ರಲ್ಲಿ ನಡೆದ ಗುಜರಾತ್ ಹತ್ಯೆ ಬಗ್ಗೆ ಬಿಬಿಸಿ ಚಾನೆಲ್ ಡಾಕ್ಯೂಮೆಂಟರಿ ಸಿದ್ಧ ಮಾಡಿತ್ತು. ಆ ಸಮಯದಲ್ಲಿ ಪ್ರಧಾನಿ ಮೋದಿ ಅವರು ಗುಜರಾತ್ ನ ಸಿಎಂ ಆಗಿದ್ದರು. ಬಿಬಿಸಿ ನಿರ್ಮಾಣ ಮಾಡಿದ ಡಾಕ್ಯೂಮೆಂಟರಿಯಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಲಾಗಿತ್ತು. ಆದ್ರೆ ಇದನ್ನು ಪ್ರಸಾರ ಮಾಡುವುದಕ್ಕೆ ಬಿಡದೆ, ಸ್ಟೇ ಆರ್ಡರ್ ತರಲಾಗಿತ್ತು. ಕೆಲವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಡಾಕ್ಯೂಮೆಂಟರಿಯನ್ನು ಡಿಲೀಟ್ ಮಾಡಿಸಲಾಗಿತ್ತು. ಅಷ್ಟೇ ಯಾಕೆ, ಕೆಲವೊಂದು ವಿವಿಗಳಲ್ಲಿ, ಊರುಗಳಲ್ಲಿ ಈ ಡಾಕ್ಯೂಮೆಂಟರಿಯನ್ನು ವಿವಾದದ ನಡುವೆಯೂ ನೋಡಿದ್ದರು. ಈ ಬೆನ್ನಲ್ಲೇ ಬಿಬಿಸಿ ಕಚೇರಿ ಮೇಲೆ ದಾಳಿ ನಡೆದಿದೆ.


