ಬ್ರಾಹ್ಮಣರ ಬಗ್ಗೆ ನಮ್ಮ ಕುಟುಂಬಕ್ಕೆ ಗೌರವ ಇದೆ.. ಆದರೆ ಪೇಶ್ವೆ DNA ಬಗ್ಗೆ : ಕುಮಾರಸ್ವಾಮಿ ಮತ್ತೆ ಹೇಳಿದ್ದೇನು..?

suddionenews
1 Min Read

ಹುಬ್ಬಳ್ಳಿ: ಚುನಾವಣೆಯ ಹೊಸ್ತಿಲಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಬ್ರಾಹ್ಮಣ ಸಿಎಂ ವಿಚಾರ ತೆಗೆದು ಬಿಜೆಪಿ ನಾಯಕರ ತಲೆಗೆ ಹುಳ ಬಿಟ್ಟಿದ್ದರು. ಈ ವಿಚಾರ ಬಾರೀ ವಿವಾದಕ್ಕೆ ಕಾರಣವಾಗಿತ್ತು. ಹೋದಲ್ಲಿ ಬಂದಲ್ಲಿ ಕುಮಾರಸ್ವಾಮಿಗೆ ಪ್ರಶ್ನೆ ಎದುರಾಗಿತ್ತು. ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ನೋಡಿಕೊಳ್ಳಲು ಬಿಜೆಪಿ ನಾಯಕರು ಯತ್ನಿಸಿದರು. ಆದ್ರೆ ಕುಮಾರಸ್ವಾಮಿ ಮತ್ತೆ ಅದನ್ನೇ ಪುನರುಚ್ಚರಿಸಿದ್ದಾರೆ. ಆ ಹೇಳಿಕೆಗೆ ಬದ್ಧರಾಗಿದ್ದಾರೆ.

ಈ ಬಗ್ಗೆ ಮತ್ತೆ ಮಾತನಾಡಿದ ಕುಮಾರಸ್ವಾಮಿ, ನನ್ನ ಹೇಳಿಕೆಗೆ ನಾನು ಬದ್ಧ. ಬ್ರಾಹ್ಮಣರ ಬಗ್ಗೆ ನಮ್ಮ ಕುಟುಂಬಕ್ಕೆ ಅಪಾರ ಗೌರವವಿದೆ. ಪೇಶ್ವೆ ಡಿಎನ್ಎ ಬಗ್ಗೆ ನನ್ನ ಪ್ರಶ್ನೆಗೆ ಬಿಜೆಪಿ ನಾಯಕರು ಮೊದಲು ಉತ್ತರ ಕೊಡಲಿ. ಬ್ರಾಹ್ಮಣ ಸಮುದಾಯಕ್ಕೆ ಅತ್ಯಂತ ಗೌರವ ಕೊಡುತ್ತೇವೆ. ಈಗಲೂ ಅದನ್ನು ಅತ್ಯಂತ ಸ್ಪಷ್ಟತೆಯಿಂದ ಹೇಳುತ್ತೇನೆ. ಮೊದಲಿನಿಂದಲೂ ನಾವೂ ಬ್ರಾಹ್ಮಣರ ಹೋಣಿಗಳಲ್ಲೇ ಬೆಳೆಸಿದ್ದೇವೆ. ನಾವೂ ಇದ್ದದ್ದು ಅಲ್ಲಿಯೇ. ಆ ಕಲ್ಚರ್ ಏನು ಅಂತ ಗೊತ್ತಿದೆ.

ಆದ್ರೆ ಪೇಶ್ವ ಕಲ್ಚರ್ ಇದೆಯಲ್ಲ ಆ ಡಿಎನ್ಎ ಅದರ ಬಗ್ಗೆ ಉತ್ತರ ಕೊಡಿ ಅಂದ್ರೆ ಯಾರು ಕೊಡ್ತಿಲ್ಲ. ನಾನು ಬ್ರಾಹ್ಮಣರು ಸಿಎಂ ಆಗಬೇಕು ಅಂತ ಏನು ಹೇಳ್ತಿಲ್ಲ. ಆದ್ರೆ ಪೇಶ್ವೆ ಡಿಎನ್ಎ ಆಗಬಾರದು. ನನ್ನ ರಾಜ್ಯ ಹಾಳಾಗಬಾರದು. ಪ್ರಹ್ಲಾದ್ ಜೋಶಿ ಬಗ್ಗೆಯೂ ಹೇಳುತ್ತಿಲ್ಲ. ಪೇಶ್ವೆ ಡಿಎನ್ಎ ಏನಿದೆ, ಅಂಥವರು ಈ ರಾಜ್ಯಕ್ಕೆ ಅಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks