ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿದ್ದರು. ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೋ ಆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕುವ ಯೋಜನೆಯಲ್ಲಿದ್ದರು. ಆದ್ರೆ ಬಿಜೆಪಿಗೆ ಸೆಡ್ಡು ಹೊಡೆದಂತೆ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಅನೌನ್ಸ್ ಮಾಡಿದರೂ. ಇದೀಗ ಆ ಕ್ಷೇತ್ರ ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಕೋಲಾರದಲ್ಲಿ ಸಿದ್ದರಾಮಯ್ಯ ಅಂದುಕೊಂಡಷ್ಟು ಗೆಲುವು ಸುಲಭವಲ್ಲ ಎಂಬ ಮಾತುಗಳು ಅದಾಗಲೇ ಕೇಳಿ ಬಂದಿದೆ. ಹೀಗಾಗಿ ಕೋಲಾರದ ಒಳಾಂಗಣ ಪರಿಸ್ಥಿತಿ ಏನು ಎಂಬುದನ್ನು ತಿಳಿಯುವುದಕ್ಕೆ ಅಹಿಂದ ಟೀಂ ಹೋಂ ವರ್ಕ್ ಮಾಡಿತ್ತು. ಇದೀಗ ಆ ವರದಿ ಸಿದ್ದರಾಮಯ್ಯ ಅವರ ಕೈಸೇರಿದೆ.
ಸದ್ಯ ಸಿದ್ದರಾಮಯ್ಯ ಪ್ರಜಾಧ್ವನಿ ಯಾತ್ರೆಯ ಮೂಲಕ ಜನರನ್ನು ತಲುಪುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಉತ್ತರ ಕರ್ನಾಟಕದ ಪ್ರವಾಸದಲ್ಲಿದ್ದಾರೆ. ಸಿದ್ದರಾಮಯ್ಯ ಕೈ ಸೇರಿರುವ ವರದಿಯ ಪ್ರಕಾರ, ಕೋಲಾರದಲ್ಲಿ ಅಹಿಂದ ತಂತ್ರ ವರ್ಕೌಟ್ ಆಗುವುದು ಅನುಮಾನ ಎನ್ನಲಾಗಿದೆ. ಕಾಂಗ್ರೆಸ್ ಕೋಲಾರ ಕ್ಷೇತ್ರದಲ್ಲಿ ಬೂತ್ ಮಟ್ಟದ ನಾಯಕರಿಲ್ಲ. ಈಗಾಗಲೇ ಅಹಿಂದ ಮತಗಳು ಚದುರಿ ಹೋಗಿವೆ. ಆ ಮತಗಳೆಲ್ಲಾ ಜೆಡಿಎಸ್ – ಬಿಜೆಪಿ ಪಾಲಾಗಿವೆ. ಅಹಿಂದ ಮತಗಳನ್ನು ನಂಬಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಧೈರ್ಯ ಮಾಡುವಂತಿಲ್ಲ. ಹೊಸದಾಗಿ ಮತ್ತೆ ಎಲ್ಲವನ್ನು ತನ್ನತ್ತ ಸೆಳೆಯುವ ಸಾಹಸಕ್ಕೆ ಕೈ ಹಾಕಲು ಸಮಯವೂ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆಯೇ ಬೆಟರ್ ಎನ್ನುವುದು ಹಲವರ ಅಭಿಪ್ರಾಯವಾಗಿದೆ.