ಚಿತ್ರದುರ್ಗ, (ಫೆ.09) : ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಪರಿಗಣಿಸಿ ನಾಡಿನ ವಿವಿಧ ಪತ್ರಕರ್ತರನ್ನು ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವ ಶೆಣೈ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಪ್ರಶಸ್ತಿ ಪುರಸ್ಕøತರನ್ನು ಪ್ರಕಟಿಸಲಾಯಿತು.
2019ನೇ ಸಾಲಿನ ವಿಶೇಷ ಪ್ರಶಸ್ತಿಯನ್ನು ಕರ್ನಾಟಕ ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆಯ ಕನ್ನಡ ಸಂಪಿಗೆ ದಿನಪತ್ರಿಕೆ ಸಂಪಾದಕ ಟಿ.ತಿಪ್ಪೇಸ್ವಾಮಿ ಸಂಪಿಗೆ ಭಾಜನರಾಗಿದ್ದಾರೆ.
ಜೊತೆಯಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ತಿಲಕ್ ಕುಮಾರ್ ನೀಡಲಾಗಿದೆ. ವಾರ್ಷಿಕ ಪ್ರಶಸ್ತಿಯನ್ನು ವಿಸ್ತಾರ್ ನ್ಯೂಸ್‍ನ ಹರಿಪ್ರಸಾದ್ ಕೋಣೆಮನೆ, ಸುವರ್ಣ ನ್ಯೂಸ್ ಪ್ರಶಾಂತ್ ನಾತು, ವಿಜಯಕರ್ನಾಟಕದ ಸುದರ್ಶನ ಚನ್ನಂಗಿಹಳ್ಳಿ, ಪ್ರಜಾವಾಣಿ ಎಸ್.ರವಿಪ್ರಕಾಶ್, ಪಬ್ಲಿಕ್ ಟಿ.ವಿ.ದಿವಾಕರ್, ದ ಹಿಂದೂ ಪತ್ರಿಕೆಯ ಅಹಿರಾಜ್, ಸಂಯುಕ್ತ ಕರ್ನಾಟಕ ಪ್ರಕಾಶ್ ಜೋಷಿ, ಕಸ್ತೂರಿ ಟಿ.ವಿ.ಮನೋಜ್ ಆರ್. ಪ್ರಜಾವಾಣಿ ಎಲ್.ಮಂಜುನಾಥ್, ನಾಗರಾಜ್ ಕುರವತ್ತೇರ್, ಬಿ.ಸುರೇಶ್, ಹೆಚ್.ವಿ.ಕಿರಣ್, ರಾಜಶೇಖರ್, ವಿನಾಯಕ ಭಟ್ ಮೂರೂರು, ಕೆಂಚೇಗೌಡ, ಅನಂತ ಶಯನ, ನಿಂಗಜ್ಜ, ಸೋಮಸುಂದರರೆಡ್ಡಿ, ರಾಘವೇಂದ್ರ ಗಣಪತಿ ಸುಧಾಕರ್ ದರ್ಬೆ, ಪ್ರಭುದೇವ್ ಶಾಸ್ತ್ರಿಮಠ, ಮಾರುತಿ, ಎಸ್.ಹೆಚ್. ಚನ್ನಪ್ಪ ಮಾದರ, ಶ್ರೀಮತಿ ಜ್ಯೋತಿ, ಸುಚೇಂದ್ರವೈ. ಲಂಬು, ಕೆ. ತಿಮ್ಮಪ್ಪ, ಆಲೂರು ಹನುಮಂತರಾಯ , ದೇವೆಂದ್ರಪ್ಪ ಕಲ್ಲಪ್ಪ ಹೆಳವಾರ್, ದೇವೇಂದ್ರ ಅವಂಟಿ ಅವರುಗಳಿಗೆ ನೀಡಲಾಗಿದೆ.
ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ರೂ.50,000 ಗಳು, ವಾರ್ಷಿಕ ಪ್ರಶಸ್ತಿ ಪುರಸ್ಕøತರಿಗೆ 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.
ಪ್ರಶಸ್ತಿ ಪ್ರದಾನ ನೆರವೇರಿಸಲು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಇತರೆ ಸಚಿವರನ್ನು ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಭಿನಂದನೆ : ಮಾಧ್ಯಮ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಟಿ.ತಿಪ್ಪೇಸ್ವಾಮಿ ಸಂಪಿಗೆ ಹಾಗೂ ಆಲೂರು ಹನುಮಂತರಾಯಪ್ಪನವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಹಾಗೂ ಹಿರಿಯ ಪತ್ರಕರ್ತ ಶ.ಮಂಜುನಾಥ್ ಅಭಿನಂದನೆ ಸಲ್ಲಿಸಿದ್ದಾರೆ.