Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ 30ನೇ ಫಲ-ಪುಷ್ಪ ಪ್ರದರ್ಶನ : ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು : ನೀವು ಭಾಗವಹಿಸಬೇಕೆ ? ಹಾಗಾದರೆ ಇಲ್ಲಿದೆ ಮಾಹಿತಿ…!

Facebook
Twitter
Telegram
WhatsApp

 

ಮಾಹಿತಿ ಕೃಪೆ 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಜನವರಿ 08)  : ಫಲ ಪುಷ್ಪ ಪ್ರದರ್ಶನ ಅಂಗವಾಗಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕೆ ಸಂಘ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ತೋಟಗಾರಿಕೆ ಆವರಣದಲ್ಲಿ ಫೆಬ್ರವರಿ 9 ರಂದು 25 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಬೆಳೆಗ್ಗೆ 10 ಗಂಟೆಗೆ ಮ್ಯೂಸಿಕಲ್ ಜೇರ್, 11.30 ಮಡಿಕೆ ಹೊಡೆಯುವ ಸ್ಪರ್ಧೆಗಳು ನಡೆಯಲಿವೆ.

ಫೆಬ್ರವರಿ 10 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರಗೆ ತರಕಾರಿ ಕೆತ್ತನೆ ಮತ್ತು ಹೂವುಗಳ ಜೋಡಣಿ  ವಿವಿಧ ರಂಗೋಲಿ ಸ್ಪರ್ಧೆ ಜರುಗಲಿವೆ. ಸ್ಪರ್ಧಿಗಳು ರಂಗೋಲಿ ಹಾಕಲು ಹಣ್ಣು, ತರಕಾರಿ ಮತ್ತು ಹೂಗಳನ್ನು, ಕಾಳುಗಳನ್ನು ಮಾತ್ರ ಉಪಯೋಗಿಸಬೇಕು.

ಫೆ.11 ರಂದು ಬೆಳೆಗ್ಗೆ 11 ರಿಂದ 12 ಗಂಟೆವರಗೆ 1 ಮತ್ತು 2 ತರಗತಿ ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಗುರುತಿಸುವ, ಬೆಳೆಗ್ಗೆ 12 ರಿಂದ 12.30ರ ವರೆಗೆ 5 ರಿಂದ 7 ಹಾಗೂ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಎರೆಡು ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2 ರಿಂದ 3 ಗಂಟೆವರಗೆ, ಆಶುಭಾಷಣ ಮತ್ತು ಪ್ರಬಂಧ ಸ್ಪರ್ಧೆ, ಸಂಜೆ 6:30ಕ್ಕೆ 1 ರಿಂದ 4 ತರಗತಿ ವಿದ್ಯಾರ್ಥಿಗಳಿಗೆ ಹೂವು-ಹಣ್ಣು, ಸೊಪ್ಪು, ತರಕಾರಿಗಳನ್ನು ಬಳಸಿದ ಫ್ಯಾನ್ಸಿ ಡ್ರಸ್ ಸ್ಪರ್ಧೆ, ಸಂಜೆ 5 ರಿಂದ 7 ಗಂಟೆವರೆಗೆ 8 ರಿಂದ 10 ತರಗತಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ವಿಭಾಗದಲ್ಲಿ ಜನಪದ ಮತ್ತು ಭಾವಗೀತೆ ಸ್ಪರ್ಧೆಗಳು ಜರುಗಲಿವೆ.

ಫೆ.11 ರಂದು ಸಾರ್ವಜನಿಕರಿಗಾಗಿ ಮನೆ ಆವರಣದಲ್ಲಿ ನಡೆಯುವ ಸ್ಪರ್ಧೆಗಳ ಅಂಗವಾಗಿ ತೀರ್ಪುಗಾರರು ಸ್ಥಳಗಳಿಗೆ ತೆರಳಿ, ವಿವಿಧ ಜಾತಿಯ ಅಲಂಕಾರಿಕ ಕುಂಡಗಳ ಜೊಡಣೆ, ಮನೆ ಮತ್ತು ಸಂಸ್ಥೆಗಳ ಆವರಣದಲ್ಲಿ ಉದ್ಯಾನವನಗಳ ಸ್ಪರ್ಧೆಯ ತೀರ್ಪಗಳನ್ನು ಕೈಗೊಳ್ಳುವರು.  ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ಮತ್ತು ನೆನಪಿನ ಕಾಣಿಕೆ ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7022100739, 9035583330 ಹಾಗೂ 9886991508 ಸಂಪರ್ಕಿಸಬಹುದು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ಜೂನ್ 3 ರಂದು ಮತದಾನ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಚಿತ್ರದುರ್ಗ. ಮೇ.03: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು ಇದ್ದು , ಜೂನ್ 3 ರಂದು ಮತದಾನ ಜರುಗಲಿದೆ ಎಂದು ಆಗ್ನೇಯ

ಚಿತ್ರದುರ್ಗದ ರಾಜಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿದ ಏಕನಾಥೇಶ್ವರಿ ಅಮ್ಮನವರ ಮೆರವಣಿಗೆ ಮತ್ತು ಗ್ರಾಮ ದೇವತೆ ಬರಗೇರಮ್ಮನವರ ಮೆರವಣಿಗೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 03 : ಏಕನಾಥೇಶ್ವರಿ ಅಮ್ಮನ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಕೋಟೆ

ನೇಹಾ ಹತ್ಯೆ ವೇಳೆ ನೆರವಿಗೆ ಧಾವಿಸಿದ ಜೋಶಿ ವಿರುದ್ಧ ಪ್ರಚಾರ ಮಾಡ್ತಿದ್ದೀರಾ ಎಂದು ಕೇಳಿದ್ದಕ್ಕೆ ನೇಹಾ ತಂದೆ ಏನಂದ್ರು..?

ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ನಡೆದಿದ್ದು, ಈಗ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಹುಬ್ಬಳ್ಳಿ ಧಾರವಾಢ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನೋದ್ ಸೂಟಿ ಸ್ಪರ್ಧೆ ಮಾಡಿದ್ದು ಅದಕ್ಕೆ ವಿರುದ್ಧ

error: Content is protected !!