ಮಾಜಿ ಸಿಎಂ ಕುಮಾರಸ್ವಾಮಿ ಬ್ರಾಹ್ಮಣ ಸಮುದಾಯದ ಸಿಎಂ ಹೇಳಿಕೆ ನೀಡಿದಾಗಿನಿಂದ ಈ ವಿಚಾರ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಇದೀಗ ಕುಮಾರಸ್ವಾಮಿ ಗೋಕರ್ಣದಲ್ಲಿ ಆತ್ಮಲಿಂಗ ಪೂಜೆ ಮಾಡಿಸಲು ಹೋಗಿದ್ದಾಗ ಅವರಿಗೆ ಪ್ರಶ್ನೆಗಳು ಎದುರಾದ ಘಟನೆ ನಡೆದಿದೆ.
ಕುಮಾರಸ್ವಾಮಿ ನೀಡಿದಂತ ಹೇಳಿಕೆಗೆ ಬಾರೀ ಆಕ್ರೋಶ ಅರ್ಚಕರು ಪ್ರಶ್ನೆ ಮಾಡಿದ್ದಾರೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಇಲ್ಲಿಯೇ ಉತ್ತರ ಕೊಟ್ಟು ಹೋಗಿ. ನಿಮ್ಮ ಹೇಳಿಕೆಯಿಂದ ನಮಗೆ ಬೇಸರವಾಗಿದೆ. ನಿಮ್ಮ ಕುಟುಂಬದ ಬಗ್ಗೆ ನಮಗೆ ತುಂಬಾ ಗೌರವ ಇದೆ. ನೀವೂ ಸಿಎಂ ಆಗಿದ್ದಾಗ ನಿಮ್ಮ ಆಡಳಿತ ಕೂಡ ಖುಷಿ ಕೊಟ್ಟಿತ್ತು. ಆದರೆ ನೀವೂ ಹೇಳಿದ ಹೇಳಿಕೆ ಬೇಸರ ತಂದಿದೆ ಎಂದು ಅರ್ಚಕರೆಲ್ಲಾ ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾರೆ.
ಅದಕ್ಕೆ ಕುಮಾರಸ್ವಾಮಿ ಉತ್ತರ ನೀಡಿದ್ದು, ಹಿಂದೂ ಧರ್ಮದ ರಕ್ಷಣೆ ನಾವೂ ಮಾಡುತ್ತೇವೆ. ನಮಗೆ ಸಾವರ್ಕರ್ ಸಂಸ್ಕೃತಿ ಬೇಡ ಎಂಬುದು ನನ್ನ ಹೇಳಿಕೆ. ಸರ್ವೆಜನೋ ಸುಖಿನೋ ಭವಂತು ಎಂಬ ಸಂಸ್ಕೃತಿ ಇರುವಂತವರು ಬ್ರಾಹ್ಮಣರಿಗೆ ನಾನು ಗೌರವ ಕೊಡುತ್ತೀನಿ ಎಂದಿದ್ದಾರೆ.
ಇನ್ನು ಗದಗದಲ್ಲಿಯೂ ಬ್ರಾಹ್ಮಣರ ಹೇಳಿಕೆಯ ಕಿಚ್ಚು ಹೆಚ್ಚಾಗಿದೆ. ಕುಮಾರಸ್ವಾಮಿ ಅವರಿಗೆ ಕ್ಷಮೆ ಕೇಳಿ ಅಂತ ಹೆಚ್ಚಿನ ಒತ್ತಾಯ ಹಾಕುತ್ತಿದ್ದಾರೆ. ಬ್ರಾಹ್ಮಣ ಸಮುದಾಯದವರು ಗಾಂಧಿ ಸರ್ಕಲ್ ನಲ್ಲಿ ಹೆಚ್ಡಿಕೆ ಫೋಟೋ ಸುಟ್ಟು ಪ್ರತಿಭಟನೆ ಮಾಡಿದ್ದಾರೆ.