ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದಿದೆ. ಈ ವರ್ಷ ರೈತರಿಗಾಗಿ ಶುಭ ಸಂಕೇತವನ್ನು ತಂದಿದೆ. ಭಾಗ್ಯದ ನಿಧಿ ತುಂಬಿತುಳುಕತಲೇ ಎಂದು ಶುಭ ನುಡಿದಿದೆ. ಪ್ರತಿ ವರ್ಷವೂ ಪದ್ಧತಿಯಂತೆ ಈ ವರ್ಷವೂ ಶ್ರೀ ಮೈಲಾರ ಲಿಂಗೇಶ್ವರ ಗೊರವಯ್ಯ ಕಾರ್ಣಿಕ ನುಡಿದಿದೆ.
ಕಾರ್ಣಿಕ ಕೇಳುವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಭಕ್ತರ ನಡುವಲ್ಲಿ ಮೇಲೆ ಏರಿದ್ದ ಗೊರವಪ್ಪ, ಮೈಲಾರ ಲಿಂಗಪ್ಪ ಕೋಟೆಪ್ಪ ಸದಲೇ ಎನ್ನುತ್ತಿರುವಾಗಲೇ ನೆರೆದಿದ್ವರೆಲ್ಲಾ ನಿಶ್ಯಬ್ಧರಾಗಿಬಿಟ್ಟರು. ಬಳಿಕ ಗೊರವಪ್ಪ ಹೇಳುವ ಕಾರ್ಣಿಕವನ್ನು ಆಲಿಸುತ್ತಾ ನಿಂತು ಬಿಟ್ಟರು.
ಇನ್ನು ಪ್ರತಿ ವರ್ಷದ ಬನದ ಹುಣ್ಣಿಮೆಯಲ್ಲಿ ಸಂಜೆ ವೇಳೆಗೆ ಕಾರ್ಣಿಕೋತ್ಸವ ನಡೆಯುತ್ತದೆ. ಈ ಕಾರ್ಣಿಕೋತ್ಸವ ವರ್ಷದಲ್ಲಿ ಎಡರು ಬಾರಿ ನಡೆಯುತ್ತದೆ. ಅದರಲ್ಲಿ ದಸರಾ ಹಬ್ಬದಲ್ಲಿಯೂ ನಡೆಯುತ್ತದೆ. ಆಗ ರಾಜಕಾರಣಿಗಳಿಗೆ ಸಂಬಂಧಪಟ್ಟಂತೆ ಕಾರ್ಣಿಕೋತ್ಸವ ನಡೆದರೆ, ಬನದ ಹುಣ್ಣಿಮೆಯಲ್ಲಿ ನಡೆಯುವ ಕಾರ್ಣಿಕ ರೈತರ ಜೀವನಗಾಥೆಯನ್ನು ತಿಳಿಸುತ್ತದೆ. ಈ ಬಾರಿಯೂ ಮಳೆ ಬೆಲೆ ಅತ್ಯುತ್ತಮವಾಗುತ್ತದೆ ಎನ್ನಲಾಗುತ್ತಿದೆ.