ಬೆಂಗಳೂರು: ಬಿಸಿಇಸಿಯಇಲ್ಲಿ ಇಂದು ಇಂಧನ ಸಪ್ತಾಹ ಸಮಾವೇಶ ನಡೆಯುತ್ತಿದೆ. ಇದನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಭಾಷಣ ಆರಂಭಿಸಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಭಾರತ ಅಭಿವೃದ್ದಿಯತ್ತ ಮುನ್ನಡೆಯುತ್ತಿದೆ. ಹೊರಗಿನ ಪರಿಸ್ಥಿತಿ ಏನೇ ಇರಲಿ, ಆಂತರಿಕ ಪರಿಸ್ಥಿತಿ ಸಧೃಢವಾಗಿದೆ ಎಂದಿದ್ದಾರೆ.
ಇಲೆಕ್ಟ್ರಿಕ್ ವಾಹನ, ಜೈವಿಕ ಇಂಧನ ಉತ್ಪಾದನೆ ಕ್ಷೇತ್ರದಲ್ಲಿ ಅಭಿವೃದ್ದಿ ಮಾಡಲಾಗುವುದು. ಒನ್ ನೇಷನ್ ಒನ್ ಗ್ರೀಡ್ ಯೋಜನೆಗೆ ಮತ್ತಷ್ಟು ವೇಗ ಹೆಚ್ಚಿಸಲಾಗುವುದು. ಮುಂದಿನ 4-5 ವರ್ಷದಲ್ಲಿ ಗ್ಯಾಸ್ ಪೈಪ್ ಲೈನ್ ಸಂಪರ್ಕದ ಗುರಿ ಹೊಂದಿದ್ದೇವೆ. ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ 8 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುವುದು. 35 ಸಾವಿರ ಗ್ಯಾಸ್ ಪೈಪ್ ಲೈನ್ ಸಂಪರ್ಕ ಮಾಡಲಾಗುವುದು. ನ್ಯಾಷನಲ್ ಗ್ರೀನ್ ಹೈಡ್ರೋಜನ್ ಮಿಷನ್ ಹೊಸ ದಿಕ್ಕು ನೀಡಲಿದೆ. ದೇಶದ ಪ್ರತಿ ಹಳ್ಳಿಗೂ ಇಂಟರ್ ನೆಟ್ ಒದಗಿಸುವ ಯೋಜನೆ ಇದೆ.
ಶ್ರೀಸಾಮಾನ್ಯರು ಹಾಗೂ ಮಧ್ಯಮವರ್ಗದ ಜನರ ಅಭಿವೃದ್ದಿಯತ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಳಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ಪ್ರಾಬಲ್ಯ ದೇಶವನ್ನು ಪ್ರಾಬಲ್ಯವಾಗಿಟ್ಟಿದೆ. ಮೊಬೈಲ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ಭಾರತ ಎರಡನೇ ಸ್ಥಾನದಲ್ಲಿದೆ ಎಂದಿದ್ದಾರೆ.