ಬೆಂಗಳೂರು: ಮಾದಾವರದ ಬಳಿ ಇರುವ ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಇಂಧನ ಸಪ್ತಾಹ ನಡೆಯುತ್ತಿದೆ. ಇದನ್ನು ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ, ಭಾಷಣ ಮಾಡಿದ್ದಾರೆ. ಟರ್ಕಿಯಲ್ಲಿ ವಿನಾಶಕಾರಿ ಭೂಕಂಪ ಬಂದಿದೆ. ನಮ್ಮೆಲ್ಲರ ದೃಷ್ಟಿ ಭೂಕಂಪದಮೇಲೆ ಬಿದ್ದಿದೆ. ಟರ್ಕಿಯ ನೆರೆ ದೇಶದಲ್ಲೂ ಅನಾಹುತವಾಗಿದೆ. ಭಾರತದ 140 ಜನ ಸಂತ್ರಸ್ತರ ಜೊತೆಗಿದ್ದಾರೆ. ಯಾವುದೇ ನೆರವು ನೀಡಲು ನಾವೂ ಸಿದ್ಧರಿದ್ದೇವೆ.
ಬೆಂಗಳೂರು ಭರಪೂರ್ಣ ತಂತ್ರಜ್ಞಾನದಿಂದ ಕೂಡಿದೆ. ಇಂಧನ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶವಿದೆ. ಅಭಿವೃದ್ಧಿ ಸಂಕಲ್ಪದಲ್ಲಿ ನಡೆಯುತ್ತಿರುವ ಭಾರತ. IMF 2023 ಅಭಿವೃದ್ಧಿ ದರ ಬಿಡುಗಡೆ ಮಾಡಿತ್ತು. ಭಾರತ ಮಾಹಾಮಾರಿ, ಯುದ್ಧದ ಬಳಿಕವೂ ಜಾಗತಿಕ ಗಮನ ಸೆಳೆದಿದೆ. ಭಾರತದಲ್ಲಿ ಅತಿವೇಗದಲ್ಲಿ ಆರ್ಥಿಜತೆ ಅಭಿವೃದ್ದಿಯಾಗುತ್ತಿದೆ.
ಪರ್ಯಾಯ ಇಂಧನ ವ್ಯವಸ್ಥೆಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಶ್ರೀಸಾಮಾನ್ಯರು, ಮಧ್ಯಮವರ್ಗದವರ ಅಭಿವೃದ್ಧಿಗೆ ನಮ್ಮ ಸರ್ಕಾರ ಕ್ರಮ ತೆಗೆದುಕೊಂಡಿದೆ.