ನವದೆಹಲಿ: ಭಾರತೀಯರಿಗೆ ಸುರಕ್ಷಿತವಲ್ಲದ ಬೆಟ್ಟಿಂಗ್ ಆ್ಯಪ್ ಹಾಗೂ ಸಾಲ ನೀಡುವ ಆ್ಯಪ್ ಗಳನ್ನು ಬ್ಯಾನ್ ಮಾಡಲು ಸರ್ಕಾರ ಯೋಚಿಸಿದೆ. ಈ ಹಿಂದೆ ಹೆಲೋ, ಟಿಕ್ ಟಾಕ್ ಅಂತ ಆ್ಯೊ್ ಗಳನ್ನು ನಿಷೇಧ ಮಾಡಲಾಗಿದೆ. ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಎಲೆಕ್ಟ್ರಿಕ್ ಹಾಗೂ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಆದೇಶದ ಮೇರೆಗೆ 138 ಬೆಟ್ಟಿಂಗ್ ಆ್ಯಪ್ ಹಾಗೂ 94 ಸಾಲ ನೀಡುವ ಆ್ಯೊ್ ಗಳನ್ನು ನಿಷೇಧಿಸುವುದಾಗಿ ತಿಳಿಸಿದೆ.
ಇತ್ತಿಚೆಗೆ ಸುಲಭವಾಗಿ ಮೊಬೈಲ್ ಮೂಲಕ ಸಾಲ ನೀಡುವ ಕೆಲಸ ಶುರುವಾಗಿದೆ. ಸಾಲ ತೆಗೆದುಕೊಂಡ ಮೇಲೆ ಅವರ ಹತ್ತಿರದವರಿಗೂ ಕಿರುಕುಳ ನೀಡುವುದಕ್ಕೆ ಶುರು ಮಾಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಸುಮಾರು ಆರು ತಿಂಗಳಿನಿಂದ 288 ಆ್ಯಪ್ ಗಳ ಕಣ್ಣಿಟ್ಟಿತ್ತು. ಬಹುತೇಕ ಆ್ಯಪ್ ಗಳು ಮೊಬೈಲ್ ಮೂಲಕ ಸಾಲ ನೀಡಿ, ಕಿರುಕುಳ ನೀಡುತ್ತಿದ್ದವು. ಸಾಲ ಹಿಂತಿರುಗಿಸದೇ ಹೋದಾಗ ಅಶ್ಲೀಲ ಪದಗಳ ಮೂಲಕ ಕೆಟ್ಟ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದವು.
ಈಗಾಗಲೇ ತೆಲಂಗಾಣ, ಒಡಿಶಾ, ಉತ್ತರ ಪ್ರದೇಶದಲ್ಲಿ ಕೇಂದ್ರ ಗುಪ್ತಚರ ಇಲಾಖೆಗಳು ಈ ಆ್ಯಪ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಗೃಹ ಸಚಿವಾಲಯದ ಮೊರೆ ಹೋಗಿದ್ದವು. ಇದೀಗ ಈ ಆ್ಯಪ್ ಗಳನ್ನು ನಿಷೇಧ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.