ಬೆಂಗಳೂರು: ಇತ್ತಿಚೆಗೆ ಎಲ್ ಕೆಜಿ/ ಯುಕೆಜಿ ಮಾಡಿಸುವುದಕ್ಕೂ ಲಕ್ಷ ಲಕ್ಷ ಹಣ ಕಟ್ಟಬೇಕಾದ ಸ್ಥಿತಿ ಇದೆ. ಅದರಲ್ಲೂ ಸಿಬಿಎಸ್ಸಿ / ಸ್ಟೇಟ್ ಸಿಲಬಸ್ ಎಂಬ ಕಾಂಪಿಟೇಷನ್ ಇದೆ. ಸ್ಟೇಟ್ ಸಿಲಬಸ್ ಗಿಂತ ಸಿಬಿಎಸ್ಸಿ ಸಿಲಬಸ್ ಗೆ ಹೆಚ್ಚು ಒತ್ತು ಕೊಡುತ್ತಾರೆ. ಹೀಗಾಗಿಯೇ ಅದೆಷ್ಟೋ ಶಾಲೆಗಳಲ್ಲಿ ಸಿಬಿಎಸ್ಸಿ ಅಂತ ಹೇಳಿ, ಸ್ಟೇಟ್ ಸಿಲಬಸ್ ನೇ ಬೋಧನೆ ಮಾಡುತ್ತಿರುವ ಘಟನೆಗಳು ನಡೆದಿವೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಒಡೆತನದ ಶಾಲೆಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಒಂದನೇ ತರಗತಿಗೇನೆ ಎಂಎಸ್ ಧೋನಿ ಒಡೆತನದ ಶಾಲೆಯಲ್ಲಿ ಲಕ್ಷ ಲಕ್ಷ ಹಣ ತೆಗೆದುಕೊಳ್ಳಲಾಗುತ್ತದೆ. ಆದ್ರೆ ಸಿಎಬಿಎಸ್ಸಿ ಅಂತ ಹೇಳಿ ಸ್ಟೇಟ್ ಸಿಲಬಸ್ ಮಾತ್ರ ಅನುಮತಿ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸಿಂಗಸಂಧ್ರದಲ್ಲಿ ಧೋನಿ ಒಡೆತನದ ಶಾಲೆ ಆರಂಭವಾಗಿದೆ. ಇಲ್ಲಿ ಒಂದರಿಂದ ಎಂಟನೇ ತರಗತಿಯವರೆಗೂ ಶಾಲೆ ಇದೆ. ಈ ಧೋನಿ ಶಾಲೆಯಲ್ಲಿ ಒಂದನೇ ತರಗತಿಗೇನೆ 1 ಲಕ್ಷದ 47 ಸಾವಿರದಷ್ಟು ಫೀಸ್ ಇದೆ. ಇನ್ನು ಮುಂದಿನ ತರಗತಿಗಳಿಗೆ ಇನ್ನು ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ. ಆದರೆ ಎಂಎಸ್ ಧೋನಿ ಗ್ಲೋಬಲ್ ಶಾಲೆ ಪೋಷಕರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಶಾಲೆಯಲ್ಲಿ ಸಿಬಿಎಸ್ಸಿ ಸಿಲಬಸ್ ಎಂದು ಹೇಳಿ ಪೋಷಕರಿಂದ ಅಡ್ಮಿಷನ್ ಮಾಡಿಸಿಕೊಳ್ಳಲಾಗಿದೆ. ಆದರೆ CBSC ಸಿಲಬಸ್ ಗೆ ಶಾಲೆಯಿಂದ ಅನುಮತಿ ಪಡೆದಿಲ್ಲ. ಕೇವಲ ಸ್ಟೇಟ್ ಸಿಲಬಸ್ ಗೆ ಮಾತ್ರ ಅನುಮತಿ ಪಡೆದಿದೆ. ಹೀಗಾಗಿ ಶಿಕ್ಷಣ ಇಲಾಖೆ ಧೋನಿ ಗ್ಲೋಬಲ್ ಶಾಲೆಗೆ ನೋಟೀಸ್ ಜಾರಿ ಮಾಡಿದೆ.