ಚಿತ್ರದುರ್ಗ : ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿಕೊಂಡು ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ತನ್ನ ಹೆಂಡತಿ ಹಾಗೂ ಮಗಳನ್ನು ಕಣಕ್ಕೆ ಇಳಿಸುವ ತಯಾರಿಯಲ್ಲಿದ್ದಾರೆ. ಇಂದು ಚಿತ್ರದುರ್ಗದ ಹಿರಿಯೂರಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮನದ ಬೇಸರ ಹೊರ ಹಾಕಿದ್ದಾರೆ.
ಹಿರಿಯೂರು ಎಂದರೆ ಒಂದು ರೀತಿಯ ಖುಷಿ ಮತ್ತು ಸಂತೋಷ ಬರುತ್ತದೆ. ಹಿರಿಯೂರಿಗೆ ನನ್ನ ಪ್ರೀತಿ ಮತ್ತು ಋಣವಿದೆ. 2008ರಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬರುವುದಕ್ಕೆ ಹಿರಿಯೂರು ಜನೆತೆಯೇ ಕಾರಣ. ಹಿರಿಯೂರು ಹಾಗೂ ಹೊಸದುರ್ಗ ಜನೆತೆಯ ಆಶೀರ್ವಾದದಿಂದ ಸರ್ಕಾರ ಅಧಿಕಾರಕ್ಕೆ ಬಂತು. ನಾನು ಹಣ ಮಾಡುವುದಕ್ಕೆ ರಾಜಕೀಯಕ್ಕೆ ಬಂದಿಲ್ಲ. ತಾಯಿ ಸುಷ್ಮಾ ಸ್ವರಾಜ್ ಗೋಸ್ಕರ ಬಂದಿದ್ದೇನೆ.
ನಾನು ಉದ್ಯಮದಲ್ಲಿಯೇ ತೊಡಗಿಕೊಂಡಿದ್ದರೆ ಇವತ್ತು ಅದಾನಿ, ಅಂಬಾನಿ ಸಾಲಿನಲ್ಲಿ ಇರುತ್ತಿದ್ದೆ. ನಾನು ಏನು ಹೇಳುತ್ತೇನೆ ಅದನ್ನೇ ಮಾಡುತ್ತೇನೆ. ಯಾವತ್ತು ಕುತಂತ್ರದಿಂದ ರಾಜಕೀಯ ಮಾಡಲಿಲ್ಲ. ರೆಡ್ಡಿ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗುತ್ತಾನೆ ಎಂಬ ಭಯಕ್ಕೆ ನನ್ನನ್ನು ಬಂಧಿಸಿದರು. ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿಟ್ಟಿದ್ದರು. ನನ್ನವರೆ ನನಗೆ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದಿದ್ದಾರೆ.