ಫೆ.05 ರಂದು ಕುಂದೂರು ಗೊಲ್ಲರಹಟ್ಟಿಯಲ್ಲಿ ತಿಮ್ಮಪ್ಪ ಸ್ವಾಮೀಜಿ ಪೀಠಾರೋಹಣ ಮತ್ತು ಅಂಬಾದೇವಿ‌ಬ್ರಹ್ಮರಥೋತ್ಸವ

1 Min Read

ಚಿತ್ರದುರ್ಗ :ಜಿಲ್ಲೆಯ ಹೊಸದುರ್ಗ ತಾಲ್ಲೂಕು ಬಾಗೂರು ಸಮೀಪದ ಕುಂದೂರು ಗೊಲ್ಲರಹಟ್ಟಿಯ ಗೋವರ್ಧನಗಿರಿ ಜಗದಾಂಬ ಮಹಾಸಂಸ್ಥಾನ ಮಠದಲ್ಲಿ ಫೆಬ್ರವರಿ 05 ರಂದು 10ನೇ ವರ್ಷದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಜರುಗಲಿದೆ.

ಮಹಾಸಂಸ್ಥಾನ ಮಠದ ತಿಮ್ಮಪ್ಪ ಸ್ವಾಮೀಜಿ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ಕಾರ್ಯಗಳು ನಡೆಯಲಿದೆ. ಭಾನುವಾರ ಭಾರತ ಹುಣ್ಣಿಮೆ ದಿನದಂದು ಬೆಳಿಗ್ಗೆ 10.30ರಿಂದ ತಿಮ್ಮಪ್ಪ ಸ್ವಾಮೀಜಿಯವರ ಗೋವರ್ಧಗಿರಿ ಸಿಂಹಾಸನ ಪೀಠಾರೋಹಣ ನಡೆಯಲಿದ್ದು, ನಂತರ ಸಂಜೆ 5ಕ್ಕೆ ಅಂಭಾದೇವಿ ಬ್ರಹ್ಮರಥೋತ್ಸವ ಜರುಗಲಿದೆ.

ರಥೋತ್ಸವದ ನಂತರ  ಗೋವರ್ಧನಗಿರಿ ಧರ್ಮದ ಬಾವುಟ ಹರಾಜು ಹಾಕಲಾಗುವುದು.

ಫೆ.6 ರಂದು ಸಂಜೆ 4.30ಕ್ಕೆ ಕುಂಭೋತ್ಸವ ಆಚರಣೆಯೊಂದಿಗೆ ಜಾತ್ರೆ ಕೊನೆಗೊಳ್ಳಲಿದೆ. ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ ಎಂದು
ಅಂಭಾದೇವಿಯ ದೇವಸ್ಥಾನ ಕಟ್ಟಡ ಕಾರ್ಯ ಆರಂಭವಾಗಿದ್ದು, ಸರ್ವ ಭಕ್ತರು ಕಟ್ಟಡ ನಿರ್ಮಾಣಕ್ಕೆ ತನು ಮನ ಧನ ಸಹಾಯದೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸ್ಥಾನ ಮಠದ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks