Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲಕ್ಷ್ಮೀ ಹೆಬ್ಬಾಳ್ಕರ್ ಸಮಯಕ್ಕಾಗಿ ಕಾದು ಕುಳಿತಿದ್ದಾರಾ..?

Facebook
Twitter
Telegram
WhatsApp

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಚುನಾವಣೆಯ ಬಿಸಿ ಜೋರಾಗಿದೆ. ಬೆಳಗಾವಿಯಲ್ಲಿ ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ ರಮೇಶ್ ಜಾರಕಿಹೊಳಿ. ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ಟಾರ್ಗೆಟ್ ಮಾಡಿದ್ದು, ಇದೇ ಕಾರಣಕ್ಕೆ ಇತ್ತಿಚೆಗೆ ಸಿಡಿ ವಿಚಾರವನ್ನು ತೆಗೆದಿದ್ದಾರೆ.

ಸಿಡಿ ಕೇಸನ್ನು ಸಿಬಿಐ ಒಪ್ಪಿಸಿದ್ರೆ ಎಲ್ಲಾ ಸತ್ಯವು ಹೊರ ಬರುತ್ತೆ ಎಂದು ಹರಿಹಾಯ್ದಿದ್ದ ರಮೇಶ್ ಜಾರಕಿಹೊಳಿ, ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧವೂ ವಿಷ ಕನ್ಯೆ ಎಂದೆಲ್ಲಾ ಕಿಡಿಕಾರಿದ್ದರು. ಆದರೆ ಇಷ್ಟೆಲ್ಲಾ ಆದರೂ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಒಂದೇ ಒಂದು ಪ್ರತಿಕ್ರಿಯೆಯನ್ನು ನೀಡಿಲ್ಲ. ಬಲ್ಲ ಮೂಲಗಳ ಪ್ರಕಾರ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಸಮಯ ನೋಡಿ ಉತ್ತರ ಕೊಡುವುದಕ್ಕೆ ಕಾಯುತ್ತಿದ್ದಾರೆ ಎನ್ನಲಾಗಿದೆ.

ಕೆಲವೊಂದು ವಿಚಾರಗಳಿಗೆ ನೇರವಾಗಿ ಉತ್ತರ ಕೊಡದೆ, ಅವರ ತಮ್ಮನ ಕಡೆಯಿಂದ ತಿರುಗೇಟು ಕೊಟ್ಟಿದ್ದಾರೆ. ಇದು ಚುನಾವಣೆ ಸಮಯ. ನಾನು ಎಚ್ಚರ ತಪ್ಪಲ್ಲ. ನಂಗೂ ಸಮಯ ಬೇಕು. ನಾನು ಸಮಯಕ್ಕಾಗಿ ಕಾಯುತ್ತಾ ಇದ್ದೀನಿ. ಚುನಾವಣೆ ಸಮಯದಲ್ಲಿ ನಾನು ಲೂಸ್ ಟಾಕ್ ಮಾಡಲ್ಲ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತರೊಬ್ಬರ ಬಳಿ ಹೇಳಿಕೊಂಡಿದ್ದರಂತೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೊದಲ ಪ್ರಯತ್ನದಲ್ಲೇ ದಾಖಲೆ ಸೃಷ್ಟಿಸಿದ ಪ್ರಿಯಾಂಕಾ : ಗಾಂಧಿ ಕುಟುಂಬದ 10 ನೇ ಸದಸ್ಯೆಯಾಗಿ ಸಂಸತ್ ಪ್ರವೇಶ…!

  ಸುದ್ದಿಒನ್ :  ಎರಡು ದಶಕಗಳ ಹಿಂದೆ ಗಾಂಧಿ-ನೆಹರೂ ಕುಟುಂಬದ ವಾರಸುದಾರೆಯಾಗಿ ರಾಜಕೀಯಕ್ಕೆ ಬಂದಿದ್ದ ಪ್ರಿಯಾಂಕಾ ಗಾಂಧಿ ಪ್ರಥಮ ಬಾರಿಗೆ ನೇರ ಚುನಾವಣಾ ಕಣಕ್ಕೆ ಇಳಿದು ದಾಖಲೆ ಸೃಷ್ಟಿಸಿದ್ದಾರೆ. ಅವರು ಕೇರಳದ ವಯನಾಡ್ ಲೋಕಸಭಾ

ಸಿದ್ಧರಾಮಯ್ಯ ಅವರನ್ನು ಕೆಣಕಿದ್ದಕ್ಕೆ ಜನ ತಕ್ಕ ಉತ್ತರ : ಮಾಜಿ ಸಚಿವ ಎಚ್.ಆಂಜನೇಯ

  ಸುದ್ದಿಒನ್, ಚಿತ್ರದುರ್ಗ, ನ. 23 : ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಆದರೆ, ಅವರ ಹೆಸರಿಗೆ ಕಳಂಕ ತರಲು ಅನಗತ್ಯವಾಗಿ ಮುಡಾ ವಿಷಯ

ಬಿಜೆಪಿಗೆ ಹೀನಾಯ ಸೋಲು : ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸೋಲು

ಸುದ್ದಿಒನ್, ಬೆಂಗಳೂರು, ನವೆಂಬರ್.23 : ಕರ್ನಾಟಕದಲ್ಲಿ ನಡೆದ ಎಲ್ಲಾ ಮೂರು ವಿಧಾನಸಭಾ ಉಪಚುನಾವಣೆಗಳಾದ ಶಿಗ್ಗಾಂವ್, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಬ್ಬರು ಬಿಜೆಪಿ ಅಭ್ಯರ್ಥಿಗಳು ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಮತದಾರ

error: Content is protected !!