ತಪ್ಪದ ಸಾನ್ಯಾ ಅಯ್ಯರ್ ಗಲಾಟೆ : ದೇವರ ಮೊರೆ ಹೋದ ಕಂಬಳ ಸಮಿತಿ..!

suddionenews
1 Min Read

ಇತ್ತಿಚೆಗೆ ನಟಿ ಸಾನ್ಯಾ ಅಯ್ಯರ್ ಪುತ್ತೂರಿನಲ್ಲಿ ನಡೆದ ಕಂಬಳಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಯುವಕರಲ್ಲಿ ಯಾರೋ ಒಬ್ಬರು ನಟಿಯ ಜೊತೆಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಸಾನ್ಯಾ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸಾನ್ಯಾ ಕಂಬಳ ಆಯೋಗರ ವಿರುದ್ಧವೂ ಕೂಗಾಡಿದ್ದ ವಿಡಿಯೋ ವೈರಲ್ ಆಗಿತ್ತು.

ಇದೀಗ ಈ ವಿಚಾರ ಮುಗಿದಂತೆ ಕಾಣುತ್ತಿಲ್ಲ. ಕಂಬಳದ ಸಮಿತಿ ದೇವರ ಮೊರೆ ಹೋಗಿದ್ದಾರೆ. ಇದರ ಅಧ್ಯಕ್ಷೆ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ನಟಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ಘಟನೆ ಸಂಬಂಧ ಸಮಿತಿಯನ್ನು ತಪ್ಪಿತಸ್ಥರನ್ನಾಗಿ ಮಾಡಲಾಗುತ್ತಿದೆ. ಆದರೆ ಆ ಘಟನೆಗೂ ಸಮಿತಿಗೂ ಯಾವುದೇ ಸಂಬಂಧವಿಲ್ಲ. ಕಾರಣ ಮೊದಲ ಬಾರಿಗೆ ನಟಿ ಕಂಬಳ ನೋಡಲು ಬಂದಾಗ ಎಲ್ಲಾ ರೀತಿಯ ಸೆಕ್ಯೂರಿಟಿ ಮಾಡಿದ್ದೇವೆ. ಬಳಿಕ ಸ್ನೇಹಿತೆಯರ ಜೊತೆಗೆ ಬಂದಾಗ ನಮಗೆ ಮಾಹಿತಿ ನೀಡಿರಲಿಲ್ಲ.

ಯಾರೋ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದರೆ ಕಂಬಳದ ಸಮಿತಿಯನ್ನು ಗುರಿ ಮಾಡುವುದು ತಪ್ಪು. ಘಟನೆಗೆ ಸಂಬಂಧಿಸಿದಂತೆ ಸಾನ್ಯಾ ಪೊಲೀಸರಿಗೆ ದೂರು ನೀಡಲಿ. ನಾವೂ ಅವರಿಗೆ ಬೆಂಬಲ ನೀಡುತ್ತೇವೆ. ಇದೇ ಘಟನೆಯನ್ನು ಮುಂದಿಟ್ಟುಕೊಂಡು ಕಂಬಳ ಸಮಿತಿಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ನಾವೂ ದೇವರ ಮೊರೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *