ಕೇಂದ್ರ ಬಜೆಟ್ ನಲ್ಲಿ ಸರ್ಕಾರಿ ನೌಕರರಿಗೆ ಸಿಕ್ಕಿದ್ದೇನು..?

ನವದೆಹಲಿ: ಸರ್ಕಾರಿ ನೌಕರಿಗಾಗಿ ಮಿಷನ್ ಕರ್ಮಯೋಗಿ ಯೋಜನೆ ಜಾರಿ ಮಾಡಲಾಗಿದೆ. ನಗರೊತ್ಥಾನಕ್ಕಾಗಿ 10 ಕೋಟಿ ಮೀಸಲು. KYC ಸರಳೀಕರಣಕ್ಕಾಗಿ ಕೇಂದ್ರ ಸರ್ಕಾರ ಕ್ರಮ. ಪ್ರಧಾನಿ ಆವಾಸ್ ಯೋಜನೆಗೆ 79 ಸಾವಿರ ಕೋಟಿ. ಮೂಲಸೌಕರ್ಯ ವ್ಯವಸ್ಥೆಗೆ 10 ಲಕ್ಷ ಕೋಟಿ. 2047ರ ಒಳಗೆ ಮ್ಯಾನ್ ಹೋಲ್ ಮುಕ್ತ ಚರಂಡಿ ವ್ಯವಸ್ಥೆ. ಇ-ಕೋರ್ಟ್ ಗಳಿ 7 ಸಾವಿರ ಕೋಟಿ.

ಲ್ಯಾಬ್ ನಲ್ಲಿ ಸಹಜ ಡೈಮಂಡ್ ಗಳ ಉತ್ಪಾದನೆ. ಲ್ಯಾಬ್ ಡೈಮಂಡ್ ರಿಸರ್ಚ್ ಗೆ ಐಐಟಿಗೆ ಅನುದಾನ. ಐಐಟಿಗೆ ಐದು ವರ್ಷಗಳ ಅಧ್ಯಯನಕ್ಕೆ ಅವಕಾಶ. 5G ಅಪ್ಲಿಕೇಷನ್ ಅಭಿವೃದ್ಧಿಗೆ 100 ಲ್ಯಾಬ್. ಕಾರ್ಬನ್ ಮುಕ್ತ ಪರಿಸರಕ್ಕೆ 35 ಸಾವಿರ ಕೋಟಿ. ಗ್ರೀನ್ ಹೈಡ್ರೋಜನ್ ಮಿಷನ್ ಗೆ 19.700 ಕೋಟಿ.

ಹಾಲಿ ಯೋಜನೆಯ ಉಪಯೋಜನೆಗೆ 6 ಸಾವಿರ ಕೋಟಿ. ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ. ದೇಶದಲ್ಲಿ 50 ವಿಮಾನ ನಿಲ್ದಾಣ ನಿರ್ಮಾಣ. ಹಸಿರು ಕ್ರಾಂತಿಗೆ ಪಿಎಂ ಪ್ರಣಾಮ್ ಸ್ಕೀಮ್. ಜೈವಿಕ ಇಂಧನ, ಜೈವಿಕ ಗೊಬ್ಬರ, ಜೈವಿಕ ಅನಿಲಕ್ಕೆ ಅನುದಾನ. ಗೋಬರ್ಧನ್ ಯೋಜನೆಯಡಿ 200 ಬಯೋಗ್ಯಾಸ್ ಪ್ಲ್ಯಾಂಟ್. 2070ಕ್ಕೆ ಭಾರತ ಕಾರ್ಬನ್ ಮುಕ್ತ ನಗರ. 10 ಸಾವಿರ ಬಯೋ ಇನ್ ಪುಟ್ ಸೆಂಟರ್ ಗಳ ನಿರ್ಮಾಣ.

Share This Article
Leave a Comment

Leave a Reply

Your email address will not be published. Required fields are marked *