ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಜಾರಿ ಮಾಡದೇ ಇದ್ದಲ್ಲಿ ಬಂಡಾಯದ ಕಹಳೆ ಮೊಳಗಿಸಿ ಮತ್ತೆ ಬಂದ್ ನಂತಹ ಹಾದಿ ತುಳಿಯಬೇಕಾಗುತ್ತದೆ ಎಂದು ಕಳಸಾ ಬಂಡೂರಿ, ಮಹಾದಾಯಿ ರೈತ ಹೋರಾಟ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಸರ್ಕಾರಕ್ಕೆ ಬಂಡಾಯದ ಎಚ್ಚರಿಕೆ ನೀಡಿದ ಕಳಸಾ ಬಂಡೂರಿ ಮತ್ತು ಮಹಾದಾಯಿ ಹೋರಾಟ ಒಕ್ಕೂಟ ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಮಹದಾಯಿ – ಕಳಸಾ ಬಂಡೂರಿ ರೈತ ಒಕ್ಕೂಟದ ನಿಯೋಗ ಇಂದು ಬಸವರಾಜ್ ಬೊಮ್ಮಯಿಯವರನ್ನ ಭೇಟಿ ನೀಡಿತು. ಕಳಸಾ ಬಂಡೂರಿ, ಮಹದಾಯಿ ಯೋಜನೆ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿತು.
ಈ ವೇಳೆ, ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ನಂತರ ಕ್ರಮ ಕೈಗೊಳ್ಳುವ ಕುರಿತು ಸಿಎಂ ಆಶ್ವಾಸನೆ ನೀಡಿದರು ಎನ್ನಲಾಗಿದೆ.ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಮುಖಂಡ ಸುಭಾಶ್ಚಂದ್ರಗೌಡ ಪಾಟೀಲ್, ಸಿಎಂ ಮೇಲೆ ನಮಗೆ ಭರವಸೆಯಿದೆ. ನಾವು ಕಾದು ನೋಡುತ್ತೇವೆ. ಒಂದು ವೇಳೆ ನಮ್ಮ ಬೇಡಿಕೆಗೆ ತಕ್ಕ ಉತ್ತರ ಸಿಗದೇ ಇದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಬಂಡಾಯದ ನೆಲದಲ್ಲಿ ಮತ್ತೊಮ್ಮೆ ಬಂಡಾಯ ಮಾಡುತ್ತೇವೆ. ಮಹದಾಯಿ ಆಗೋವರೆಗೂ ನಾವು ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.