Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರಕ್ಕೆ ಬಂಡಾಯದ ಎಚ್ಚರಿಕೆ ನೀಡಿದ ಕಳಸಾ ಬಂಡೂರಿ – ಮಹಾದಾಯಿ ಹೋರಾಟಗಾರರು

Facebook
Twitter
Telegram
WhatsApp

ಬೆಂಗಳೂರು: ಕಳಸಾ ಬಂಡೂರಿ ಯೋಜನೆ ಜಾರಿ ಮಾಡದೇ ಇದ್ದಲ್ಲಿ ಬಂಡಾಯದ ಕಹಳೆ ಮೊಳಗಿಸಿ ಮತ್ತೆ ಬಂದ್ ನಂತಹ ಹಾದಿ ತುಳಿಯಬೇಕಾಗುತ್ತದೆ ಎಂದು ಕಳಸಾ ಬಂಡೂರಿ, ಮಹಾದಾಯಿ ರೈತ ಹೋರಾಟ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಸರ್ಕಾರಕ್ಕೆ ಬಂಡಾಯದ ಎಚ್ಚರಿಕೆ ನೀಡಿದ ಕಳಸಾ ಬಂಡೂರಿ ಮತ್ತು ಮಹಾದಾಯಿ ಹೋರಾಟ ಒಕ್ಕೂಟ ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಮಹದಾಯಿ – ಕಳಸಾ ಬಂಡೂರಿ‌ ರೈತ ಒಕ್ಕೂಟದ ನಿಯೋಗ ಇಂದು ಬಸವರಾಜ್ ಬೊಮ್ಮಯಿಯವರನ್ನ ಭೇಟಿ ನೀಡಿತು. ಕಳಸಾ ಬಂಡೂರಿ, ಮಹದಾಯಿ ಯೋಜನೆ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿತು.

ಈ ವೇಳೆ, ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ನಂತರ ಕ್ರಮ ಕೈಗೊಳ್ಳುವ ಕುರಿತು ಸಿಎಂ ಆಶ್ವಾಸನೆ ನೀಡಿದರು ಎನ್ನಲಾಗಿದೆ.ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಮುಖಂಡ ಸುಭಾಶ್ಚಂದ್ರಗೌಡ ಪಾಟೀಲ್, ಸಿಎಂ ಮೇಲೆ ನಮಗೆ ಭರವಸೆಯಿದೆ. ನಾವು ಕಾದು ನೋಡುತ್ತೇವೆ. ಒಂದು ವೇಳೆ ನಮ್ಮ ಬೇಡಿಕೆಗೆ ತಕ್ಕ ಉತ್ತರ ಸಿಗದೇ ಇದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಬಂಡಾಯದ ನೆಲದಲ್ಲಿ ಮತ್ತೊಮ್ಮೆ ಬಂಡಾಯ ಮಾಡುತ್ತೇವೆ. ಮಹದಾಯಿ ಆಗೋವರೆಗೂ ನಾವು ಹೋರಾಟ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ

ಈ ರಾಶಿಗಳ ಗೃಹ ಕಟ್ಟಡ ಉದ್ಯಮದಾರಿಗೆ ಆರ್ಥಿಕ ಚೇತರಿಕೆ, ಶುಕ್ರವಾರ ರಾಶಿ ಭವಿಷ್ಯ -ಏಪ್ರಿಲ್-19,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,ಚೈತ್ರಮಾಸ,ಶುಕ್ಲ ಪಕ್ಷ,

ಕೋಟಿ ಕೋಟಿ ಆಸ್ತಿಯ ಒಡೆಯ ದಿಂಗಾಲೇಶ್ವರ ಸ್ವಾಮೀಜಿ : ಚಿನ್ನ, ಬೆಳ್ಳಿ ಸೇರಿ ಏನೆಲ್ಲಾ ಇದೆ‌ ಗೊತ್ತಾ..?

ಹುಬ್ಬಳ್ಳಿ: ಪ್ರಹ್ಲಾದ್ ಜೋಶಿ ಸ್ಪರ್ಧೆಗೆ ವಿರೋಧಿಸಿ, ಬಿಜೆಪಿ ಅಭ್ಯರ್ಥಿ ಪರ ಸ್ಪರ್ಧೆಗೆ ನಿಂತಿರುವ ದಿಂಗಾಲೇಶ್ವರ ಸ್ವಾಮೀಜಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ತಮ್ಮ ಬಳಿ ಇರುವ ಚರಾಸ್ಥಿ-ಸ್ಥಿರಾಸ್ತಿ ಸೇರಿದಂತೆ ಎಲ್ಲಾ ವಿವರವನ್ನು

ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಪುತ್ರಿಯನ್ನೇ ಚಾಕುವಿನಿಂದ ಇರಿದು ಕೊಲೆ : ಬೆಚ್ಚಿ ಬಿದ್ದ ಹುಬ್ಬಳ್ಳಿ-ಧಾರವಾಡ ಮಂದಿ

ಹುಬ್ಬಳ್ಳಿ: ಪ್ರೀತಿ ಮಾಡಲು ನಿರಾಕರಿಸಿದ್ದಕ್ಕೆ ಕಾರ್ಪೋರೇಟರ್ ಮಗಳನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ನಡೆದಿದೆ. ನೇಹಾ ಬರ್ಬರವಾಗಿ ಕೊಲೆಯಾದ ಯುವತಿ. ಫಯಾಜ್ ಕೊಲೆ ಮಾಡಿದಾತ. ನೇಹಾ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ

error: Content is protected !!