ಬೆಂಗಳೂರು: ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ ಎಸ್ ಎಂ ಕೃಷ್ಣ ಅವರು ಇತ್ತಿಚೆಗೆ ಎಲ್ಲಿಯೂ ರಾಜಕೀಯ ಕಾರ್ಯಕ್ರಮದಲ್ಲಿ ಗುರುತಿಸಿಕೊಳ್ಳುತ್ತಿರಲಿಲ್ಲ. ರಾಜಕೀಯ ನಿವೃತ್ತಿ ಪಡೆದಿರುವುದಾಗಿಯೇ ತಿಳಿಸಿದ್ದರು. ಇದೀಗ ಎಸ್ ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಬಂದ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು, ಇದು ಬಯಸದೇ ಬಂದ ಭಾಗ್ಯ. ನಾನು ಎಲ್ಲಾ ನಿರೀಕ್ಷೆಗಳನ್ನು ಬಿಟ್ಟು ಬಿಟ್ಟಿದ್ದೆ. ಆರು ದಶಕಗಳ ಕಾಲ ಕನ್ನಡಿಗರು ನನ್ನನ್ನು ಪೋಷಣೆ ಮಾಡಿದ್ದಾರೆ. ಏಳು ಕೋಟಿ ಕನ್ನಡಿಗರಿಗೆ, ಭಾರತೀಯರಿಗೆ ಈ ಪ್ರಶಸ್ತಿಯನ್ನು ನಾನು ಅರ್ಪಣೆ ಮಾಡುತ್ತೇನೆ. ಪ್ರಧಾನ ಮಂತ್ರಿಗಳು, ಗೃಹ ಸಚಿವರಿಗೆ ಅನಂತ ಧನ್ಯವಾದ ಸಮರ್ಪಣೆ ಮಾಡುತ್ತೇನೆ ಎಂದಿದ್ದಾರೆ.
ಆಗಿನ ರಾಜಕಾರಣವೇ ಬೇರೆ, ಈಗಿನ ರಾಜಕಾರಣವೇ ಬೇರೆ. ರಾಜಕಾರಣ ಅದರದ್ದೇ ದಿಕ್ಕು ದೆಶೆಯನ್ನು ಹೊಂದಿರುತ್ತದೆ. ಕಾಲಘಟ್ಟಕ್ಕೆ ತಕ್ಕಂತೆ ಬದಲಾಗುತ್ತಾ ಇರುತ್ತದೆ. ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ರಾಜಕಾರಣಿಗಳು ಚರ್ಚೆ ಮಾಡುತ್ತಾರೆ. ನಾನು ಸಕ್ರೀಯ ರಾಜಕಾರಣದಿಂದ ನಿವೃತ್ತಿ ಪಡೆದಿರುವ ಕಾರಣ ಅಂಥಹ ವಿಚಾರಗಳ ಬಗ್ಗೆ ನಾನು ಚರ್ಚೆ ನಡೆಸುವುದಿಲ್ಲ ಎಂದಿದ್ದಾರೆ.