ಚಾಮರಾಜನಗರ: 2023ರ ವಿಧಾನಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿಯೇ ಪಕ್ಷ ಸಂಘಟನೆಗೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯ ರಾಜ್ಯಗಳನ್ನು ಸುತ್ತುತ್ತಿದ್ದಾರೆ. ಇನ್ನು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ರಾಜ್ಯದ ನಾಯಕರು ಕೂಡ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಪ್ರಜಾಧ್ವನಿ ಮೂಲಕ ಭರವಸೆಗಳನ್ನು ನೀಡುತ್ತಿದ್ದಾರೆ. ಆದರೆ ಪೊರಜಾಧ್ವನಿ ವೇದಿಕೆಯಲ್ಲಿ ಡಿಕೆಶಿಗೆ ಕೋಪ ತರಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಾವಾಗಲೂ ತಮ್ಮ ಭಾಷಣದಲ್ಲಿ ಒಂದು ಮಾತು ಹೇಳುತ್ತಾರೆ. ವ್ಯಕ್ತಿ ಪೂಜೆ ಮಾಡುವುದನ್ನು ನಿಲ್ಲಿಸಿ, ಪಕ್ಷವನ್ನು ಬೆಳೆಸಿ ಎಂದು. ಅದನ್ನೇ ಫಾಲೋ ಮಾಡುವುದಕ್ಕೂ ಒತ್ತು ನೀಡುತ್ತಾರೆ. ಆದರೆ ಚಾಮರಾಜನಗರದಲ್ಲಿ ಪ್ರಜಾಧ್ವನಿ ಸಮಾವೇಶ ನಡೆಯುತ್ತಿದ್ದಾಗ ಡಿಕೆಶಿ ವೇದಿಕೆ ಮೇಲೆ ಭಾಷಣ ಮಾಡಲು ನಿಂತಿದ್ದರು.
ಈ ವೇಳೆ ಬಂದ ಸಿದ್ದರಾಮಯ್ಯ ಅವರ ಬೆಂಬಲಿಗರು ನೇರವಾಗಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡಲು ಮುಂದಾದರೂ. ಆಗ ಡಿಕೆ ಶಿವಕುಮಾರ್ ಅವರು ಗರಂ ಆದರು. ಏಯ್.. ಒಂದು ಶಿಸ್ತು ಬೇಡ್ವಾ..? ಹೋಗ್ರಿ ನಿಮ್ಮತ್ರ ಮಾತ್ರನಾ ಹಾರ ಇರುವುದು. ವೇದಿಕೆಯಲ್ಲಿ ಕುಳಿತಿರುವವರ ಬಳಿ ಇಲ್ಲವಾ..? ಎಲ್ಲಾ ಮುಗಿದ ಮೇಲೆ ಮಾಡಿ ಎಂದರೂ. ಆದರೂ ಬೆಂಬಲಿಗರು ಕ್ಯಾರೆ ಎನ್ನದೆ ಸನ್ಮಾನ ಮಾಡಿಯೇ ಹೋದರು. ಡಿಕೆಶಿ ಸುಮ್ಮನೆ ನೋಡುತ್ತಾ ನಿಂತು ಬಳಿಕ ಭಾಷಣ ಶುರು ಮಾಡಿದರು.